ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ರಿಷಭ್ ಪಂತ್ ನೇಮಕ

Update: 2021-03-31 15:15 GMT

ಹೊಸದಿಲ್ಲಿ:  ರಿಷಭ್ ಪಂತ್ ಅವರನ್ನು 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಾಯಕರನ್ನಾಗಿ  ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ನೇಮಿಸಿದೆ.

ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿರುವ ಕಾರಣ ಉಪ ನಾಯಕ ಪಂತ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ.

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಂತ್ ಟೆಸ್ಟ್ ತಂಡದಲ್ಲಿ ಕಳೆದ 4 ತಿಂಗಳುಗಳಿಂದ ಮ್ಯಾಚ್-ವಿನ್ನರ್ ಆಗಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಅವರು ಸೀಮಿತ ಓವರ್ ಕ್ರಿಕೆಟ್ ನಲ್ಲಿ ಭರ್ಜರಿ ಪುನರಾಗಮನ ಮಾಡಿದ್ದಾರೆ.

ಇದು ಯುವ ಬ್ಯಾಟ್ಸ್ ಮನ್ ರಿಷಭ್ ಗೆ ಲಭಿಸಿರುವ ಅದ್ಭುತ ಅವಕಾಶ.  ಪಂತ್ ಅವರು ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಯಶಸ್ವಿ ಪ್ರದರ್ಶನ ನೀಡಿ ಆತ್ವವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್ ಹಾಗೂ 2 ವರ್ಷಗಳ ಹಿಂದೆ ಪಂಜಾಬ್ ತಂಡವನ್ನು ಮುನ್ನಡೆಸಿರುವ ರವಿಚಂದ್ರನ್ ಅಶ್ವಿನ್ ತಂಡದಲ್ಲಿದ್ದರೂ ಕ್ಯಾಪಿಟಲ್ಸ್ ತಂಡ ಯುವಕರಿಗೆ ಮಣೆ ಹಾಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News