ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಯಾಗಿ ಪರಿವರ್ತನೆ

Update: 2021-03-31 17:51 GMT

ಬೆಂಗಳೂರು, ಮಾ. 31: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಅಧಿನಿಯಮ 2020ರಡಿಯಲ್ಲಿ ಬಿಬಿಎಂಪಿ ಆಯುಕ್ತರ ಹುದ್ದೆಗಳನ್ನು 2021ರ ಎಪ್ರಿಲ್ 1ರಿಂದ ಅನ್ವಯವಾಗುವಂತೆ ಬಿಬಿಎಂಪಿಯ ಮುಖ್ಯ ಆಯುಕ್ತರ ಹುದ್ದೆಯಾಗಿ ಪರಿವರ್ತಿಸಿ ನಗರಾಭಿವೃದ್ಧಿ ಇಲಾಖೆ ಸರಕಾರದ ಜಂಟಿ ಕಾರ್ಯದರ್ಶಿ ಹಿದಾಯತ್ತುಲ್ಲ ಕೆ.ಎ. ಆದೇಶ ಹೊರಡಿಸಿದ್ದಾರೆ.

ಪೂರ್ವ ವಲಯ-ಮನೋಜ್ ಜೈನ್ ವಿಶೇಷ ಆಯುಕ್ತರು(ಯೋಜನೆ), ಪಶ್ಚಿಮ-ಬಸವರಾಜು ಎಸ್. ವಿಶೇಷ ಆಯುಕ್ತರು(ಕಂದಾಯ), ದಕ್ಷಿಣ-ತುಳಸಿ ಮದ್ದಿನೇನಿ ವಿಶೇಷ ಆಯುಕ್ತರು(ಹಣಕಾಸು), ದಾಸರಹಳ್ಳಿ- ರವೀಂದ್ರ ಎಸ್.ಜಿ. ವಿಶೇಷ ಆಯುಕ್ತರು(ಕಲ್ಯಾಣ), ರಾಜರಾಜೇಶ್ವರಿನಗರ- ಬಿ.ರೆಡ್ಡಿ ಶಂಕರ್ ಬಾಬು ವಿಶೇಷ ಆಯುಕ್ತರು(ಆಸ್ತಿ, ಶಿಕ್ಷಣ, ಮಾರುಕಟ್ಟೆ).

ಬೊಮ್ಮನಹಳ್ಳಿ- ರಾಜೇಂದ್ರ ಚೋಳನ್ ಪಿ.ವಿಶೇಷ ಆಯುಕ್ತರು(ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ), ಮಹದೇವಪುರ-ರಂದೀಪ್ ಡಿ. ವಿಶೇಷ ಆಯುಕ್ತರು(ಘನತ್ಯಾಜ್ಯ ನಿರ್ವಹಣೆ) ಹಾಗೂ ಯಲಹಂಕ-ರಂದೀಪ್ ಡಿ. ವಿಶೇಷ ಆಯುಕ್ತರು(ಆಡಳಿತ) ಇವರನ್ನು ನಿಯೋಜಿಸಲಾಗಿದೆ. ಬಿಬಿಎಂಪಿ ಮತ್ತು ಸರಕಾರವೂ ಸೇರಿದಂತೆ ಯಾವುದೇ ಪ್ರಾಧಿಕಾರದ ನಡುವೆ ಬಿಬಿಎಂಪಿ ಪರವಾಗಿ ಪತ್ರ ವ್ಯವಹಾರವನ್ನು ಮುಖ್ಯ ಆಯುಕ್ತರೇ ನಿರ್ವಹಿಸತಕ್ಕದ್ದು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News