ಬಿಎಸ್‍ವೈ ಮುಕ್ತ ಬಿಜೆಪಿ ಆಗುವ ಕಾಲ ಸನ್ನಿಹಿತ: ಕಾಂಗ್ರೆಸ್
ಬೆಂಗಳೂರು, ಎ.1: ಈ ಸರಕಾರ ರಾಜ್ಯ ಬಿಜೆಪಿ ಪಕ್ಷದ ರಾಜಕೀಯ ವ್ಯಭಿಚಾರಕ್ಕೆ ಹುಟ್ಟಿದ ‘ಅನೈತಿಕ ಕೂಸು’. ‘ಆಪರೇಷನ್ ಕಮಲ’ ಎನ್ನುವ ಅನಿಷ್ಟ ಪದ್ಧತಿಯನ್ನು ಹುಟ್ಟುಹಾಕಿ ಶಾಸಕರನ್ನು ಐಟಿ, ಇಡಿ ಬೆದರಿಕೆ, ಹನಿಟ್ರಾಪ್ ಬ್ಲಾಕ್ಮೇಲ್, ಹಣದ ಆಮಿಷ ಎಲ್ಲವನ್ನೂ ಬಳಸಿಕೊಂಡಿದ್ದು ಒಂದೊಂದಾಗಿ ಬಯಲಾಗುತ್ತಿವೆ. ಇದರೊಂದಿಗೆ ಬಿಎಸ್‍ವೈ ಮುಕ್ತ ಬಿಜೆಪಿ ಆಗುವ ಕಾಲವೂ ಸನ್ನಿಹಿತವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದುದ್ದನ್ನ ಕಾಂಗ್ರೆಸ್ ಎತ್ತಿ ಹಿಡಿದಾಗ ಬಿಜೆಪಿ ರಾಜಕೀಯ ದುರುದ್ದೇಶವೆಂದು ತಿಪ್ಪೆ ಸಾರಿಸುತ್ತಿತ್ತು. ಆದರೆ ಸ್ವತಃ ಬಿಜೆಪಿ ಶಾಸಕರೇ ಇತ್ತೀಚಿಗೆ ತಮಗಾದ ಅನ್ಯಾಯ ವ್ಯಕ್ತಪಡಿಸುತ್ತಿದ್ದರು, ಯತ್ನಾಳ್ ಬಹಿರಂಗವಾಗಿ ಬಂಡವಾಳ ಬಿಚ್ಚಿಟ್ಟಿದ್ದರು, ಈಗ ಈಶ್ವರಪ್ಪ ಗಂಭೀರ ಆರೋಪ ಎತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕೊರೋನ ಸೋಂಕಿನಲ್ಲಿ ಭ್ರಷ್ಟಾಚಾರ. ಬಿಡಿಗಾಸಿನ ನೆರೆ ಪರಿಹಾರದಲ್ಲಿ ಭ್ರಷ್ಟಾಚಾರ. ವರ್ಗಾವಣೆಯಲ್ಲಿ ಭ್ರಷ್ಟಾಚಾರ. ಅನುದಾನ ಬಿಡುಗಡೆಯಲ್ಲಿ ಭ್ರಷ್ಟಾಚಾರ. ಆಪರೇಷನ್ ಕಮಲದ ಭ್ರಷ್ಟಾಚಾರ. ರಾಜ್ಯ ಬಿಜೆಪಿ ಸರಕಾರದಲ್ಲಿ ಲೂಟಿಯೇ ಯೋಜನೆಯಾಗಿದೆ ಹೊರತು ಜನಹಿತಕ್ಕಾಗಿ ಒಂದೂ ಯೋಜನೆ ಇಲ್ಲ. ಬಿಜೆಪಿ/ಬಿಜೆಪಿ ಕಿತ್ತಾಟದಲ್ಲಿ ರಹಸ್ಯ ಹೊರಬೀಳುತ್ತಿವೆ ಎಂದು ಕಾಂಗ್ರೆಸ್ ಹೇಳಿದೆ.
ವ್ಯಂಗ್ಯ: ಬಿಜೆಪಿಗರ ಮಾತು ಕೇಳಿದಾಗಲೆಲ್ಲ ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿಯೇ ಮೊದಲು ಹುಟ್ಟಿದ್ದೋ? ಅನುಮಾನ ಮೂಡುತ್ತದೆ. ಎಳೆ ಕೂಸು ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ನಿಮ್ಮ ಚಿಕ್ಕಪ್ಪ ಅಲ್ಲವೇ? ಕುಟುಂಬ ರಾಜಕಾರಣವೇ ಇಲ್ಲ ಎಂದು ರಾಜಾರೋಷವಾಗಿ ಸುಳ್ಳಾಡುವ ಬಿಜೆಪಿಗರೇ. ನಿಮ್ಮವರ ಡಿಎನ್‍ಎ ಪರೀಕ್ಷೆ ಮಾಡಿಸೋಣವೇ? ಅನುಮಾನ ಬಗೆಹರಿದುಬಿಡಲಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಸರ್ಕಾರ@BJP4Karnataka ಪಕ್ಷದ ರಾಜಕೀಯ ವ್ಯಭಿಚಾರಕ್ಕೆ ಹುಟ್ಟಿದ "ಅನೈತಿಕ ಕೂಸು"
— Karnataka Congress (@INCKarnataka) April 1, 2021
"ಆಪರೇಷನ್ ಕಮಲ"ಎನ್ನುವ ಅನಿಷ್ಟ ಪದ್ಧತಿಯನ್ನು ಹುಟ್ಟುಹಾಕಿ ಶಾಸಕರನ್ನು ಐಟಿ, ಇಡಿ ಬೆದರಿಕೆ, ಹನಿಟ್ರಾಪ್ ಬ್ಲಾಕ್ಮೇಲ್, ಹಣದ ಆಮಿಷ ಎಲ್ಲವನ್ನೂ ಬಳಸಿಕೊಂಡಿದ್ದು ಒಂದೊಂದಾಗಿ ಬಯಲಾಗುತ್ತಿವೆ.
ಇದರೊಂದಿಗೆ #BSYmuktaBJP ಆಗುವ ಕಾಲವೂ ಸನ್ನಿಹಿತವಾಗಿದೆ.