×
Ad

ರಾಜ್ಯ ಮಟ್ಟದ ಈಜು ಚಾಂಪಿಯನ್‌ಶಿಪ್: 4 ಪದಕ ಗೆದ್ದ ಅಬ್ದುಲ್ ವಾಫಿ ಹಕೀಮ್

Update: 2021-04-01 18:30 IST

ಬೆಂಗಳೂರು, ಎ.1: ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ಕರ್ನಾಟಕ ಈಜು ಸಂಘವು ರಾಜ್ಯ ಮಟ್ಟದ ಈಜು ಚಾಂಪಿಯನ್‌ಶಿಪ್- 2021ಅನ್ನು ಮಾರ್ಚ್ 29ರಿಂದ 31ರವರೆಗೆ ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಆಯೋಜಿಸಿತು.

ಗ್ರೂಪ್ 3 ವಿಭಾಗದ ಸ್ಪರ್ಧೆಯಲ್ಲಿ ಅಬ್ದುಲ್ ವಾಫಿ ಹಕೀಮ್ 50 ಮೀ ಬ್ಯಾಕ್ ಸ್ಟ್ರೋಕ್ ಮತ್ತು 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕ, 50 ಮೀ ಫ್ರೀ ಸ್ಟೈಲ್ ಮತ್ತು 100 ಮೀ ಫ್ರೀ ಸ್ಟೈಲ್‌ನಲ್ಲಿ ಕಂಚಿನ ಪದಕ ಪಡೆದರು.

ಗ್ರೂಪ್ 3 ವಿಭಾಗದ ಸ್ಪರ್ಧೆಯಲ್ಲಿ ಕೆ.ಜನನಿ 200 ಮೀಟರ್ ಫ್ರೀಸ್ಟೈಲ್ ನಲ್ಲಿ ಕಂಚಿನ ಪದಕ ಪಡೆದರೆ, ಔರೆಲಿಯಾ ಡಯಾಸ್ ಗ್ರೂಪ್ 4ರ ಎ ವಿಭಾಗದ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಈ ಮೂವರು ಸ್ಪರ್ಧಿಗಳೂ ವಿ.ರಾಮಕೃಷ್ಣ ರಾವ್ ಹಾಗೂ ರಾಜೇಶ್ ಅಂಥೋನಿ ಬೆಂಗ್ರೆ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News