ಮೊದಲ ಏಕದಿನ: ಪಾಕಿಸ್ತಾನಕ್ಕೆ ಜಯ

Update: 2021-04-04 05:11 GMT

 ಸೆಂಚುರಿಯನ್: ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು ಮೂರು ವಿಕೆಟ್‌ಗಳಿಂದ ಮಣಿಸಿದೆ.

 ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಅವರು ಪಂದ್ಯವನ್ನು ಮುಗಿಸಲು ಸಾಧ್ಯವಾಗದ ಕಾರಣ ಸ್ವತಃ ನಿರಾಶೆಗೊಂಡರು. ಪಾಕಿಸ್ತಾನ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲುವಿಗೆ 274 ರನ್ ಗಳಿಸಬೇಕಿದ್ದ ಪಾಕಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿತು. ಅನ್ರಿಚ್ ನಾರ್ಟ್ಜೆ(51ಕ್ಕೆ 4) ದಾಳಿಗೆ ಸಿಲುಕಿ ಪಾಕಿಸ್ತಾನ ಮೊದಲ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತ್ತು. ಎರಡನೇ ವಿಕೆಟ್‌ಗೆ ಇಮಾಮ್ ಮತ್ತು ಬಾಬರ್ ಆಝಮ್ 177 ರನ್‌ಗಳ ಜೊತೆಯಾಟ ನೀಡಿದರು. ಇಮಾಮ್ (70) ಮತ್ತು ಬಾಬರ್ ಆಝಮ್ (103) ಇಬ್ಬರೂ ತಮ್ಮ ವೈಯಕ್ತಿಕ ಮೈಲಿಗಲ್ಲುಗಳನ್ನು ದಾಟಿದರು. ಬಾಬರ್ ಆಝಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

 ಹೀಗಿದ್ದರೂ ಅನ್ರಿಚ್ ನಾರ್ಟ್ಜೆ ದಾಳಿಗೆ ತತ್ತರಿಸಿ 37.4ನೇ ಓವರ್‌ನಲ್ಲಿ ಪಾಕಿಸ್ತಾನ 5 ವಿಕೆಟ್ ನಷ್ಟದಲ್ಲಿ 203 ರನ್ ಗಳಿಸಿತ್ತು. ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 13 ಏಕದಿನ ಶತಕಗಳನ್ನು ಗಳಿಸಿದ ಆಝಮ್ ಅವರು ವಿರಾಟ್ ಕೊಹ್ಲಿ ಮತ್ತು ಹಾಶಿಮ್ ಆಮ್ಲಾ ಅವರನ್ನು ಹಿಂಬಾಲಿಸಿದ್ದಾರೆ.

 ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ರಾಸ್ಸಿ ವ್ಯಾನ್ ಡರ್ ಡುಸೆನ್ ಚೊಚ್ಚಲ ಶತಕ (ಔಟಾಗದೆ 123) ಮತ್ತು ಡೇವಿಡ್ ಮಿಲ್ಲರ್ ಅರ್ಧಶತಕ (50) ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 273 ರನ್ ಗಳಿಸಿತ್ತು.

ರವಿವಾರ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News