ಅಕ್ಷಯ್ ಕುಮಾರ್ ಗೆ ಕೊರೋನ ಪಾಸಿಟಿವ್

Update: 2021-04-04 05:40 GMT

ಹೊಸದಿಲ್ಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ತನಗೆ ನೋವಲ್ ಕೊರೋನವೈರಸ್ ಸೋಂಕು ತಗಲಿದೆ ಎಂದು ರವಿವಾರ ಇನ್ ಸ್ಟಾಗ್ರಾಮ್ ಮೂಲಕ ಬಹಿರಂಗಪಡಿಸಿದ್ದಾರೆ.
ತನ್ನೊಂದಿಗೆ ಸಂಪರ್ಕಕ್ಕೆ ಬಂದವರು ಕೊರೋನ ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ನಟ ಅಕ್ಷಯ್ ವಿನಂತಿಸಿದ್ದಾರೆ.

ಅಕ್ಷಯ್ ಅವರು ಸದ್ಯ 'ರಾಮಸೇತು' ಚಿತ್ರದ ಶೂಟಿಂಗ್ ನಲ್ಲಿ ವ್ಯಸ್ತರಾಗಿದ್ದಾರೆ. 

"ನಾನು ಬೆಳಗ್ಗೆ  ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು,ಕೊರೋನ ಪಾಸಿಟಿವ್ ಆಗಿದೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಎಲ್ಲ ಶಿಷ್ಟಾಚಾರವನ್ನು ಅನುಸರಿಸುತ್ತಾ ತಕ್ಷಣವೇ ಎಲ್ಲರಿಂದ ಪ್ರತ್ಯೇಕವಾಗಿದ್ದೇನೆ.ನಾನೀಗ ಮನೆಯಲ್ಲೇ ಕ್ವಾರಂಟೈನ್ ಆಗಿರುವೆ. ಅಗತ್ಯವಿರುವ ವೈದ್ಯಕೀಯ ಆರೈಕೆಯ ನಿರೀಕ್ಷೆಯಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಸ್ವತಃ ಪರೀಕ್ಷೆಗೆ ಒಳಗಾಗಬೇಕಾಗಿ ವಿನಂತಿಸುವೆ. ಶೀಘ್ರವೇ ತನ್ನ ಕೆಲಸಕ್ಕೆ ವಾಪಸಾಗುತ್ತೇನೆ'' ಎಂದು ಅಕ್ಷಯ್ ಕುಮಾರ್ ಇನ್‍ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News