ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಶಿಖಾ ಪಾಂಡೆಗೆ ಸ್ಥಾನ

Update: 2021-04-07 04:58 GMT

  ಹಿಂದಿನ ಸ್ಥಾನವನ್ನು ಉಳಿಸಿಕೊಂಡ ಮಂಧಾನ, ಮಿಥಾಲಿ ದುಬೈ : ಭಾರತದ ಓಪನರ್ ಸ್ಮತಿ ಮಂಧಾನ, ವೇಗದ ಬೌಲರ್ ಜುಲಾನ್ ಗೋಸ್ವಾಮಿ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಮಂಗಳವಾರ ಬಿಡುಗಡೆಯಾದ ಪಟ್ಟಿಯಲ್ಲಿ ತಮ್ಮ ಹಿಂದಿನ ಸ್ಥಾನಗಳನ್ನು ಉಳಿಸಿಕೊಂಡಿದ್ದರೂ, ವೇಗಿ ಶಿಖಾ ಪಾಂಡೆ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

710 ಪಾಯಿಂಟ್‌ಗಳೊಂದಿಗೆ ಮಂಧಾನ ಏಳನೇ ಸ್ಥಾನವನ್ನು ಪಡೆದರೆ, ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಯಕ ಮಿಥಾಲಿ ರಾಜ್ (709) ಎಂಟನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ (765) ಅಗ್ರಸ್ಥಾನದಲ್ಲಿದ್ದಾರೆ.

 ಬೌಲಿಂಗ್‌ನಲ್ಲಿ ಅನುಭವಿ ವೇಗಿ ಗೋಸ್ವಾಮಿ 681 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಪೂನಂ ಯಾದವ್ (641) ಎಂಟನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ ಕೊನೆಯದಾಗಿ 2019ರ ನವೆಂಬರ್‌ನಲ್ಲಿ ಏಕದಿನ ಪಂದ್ಯ ಆಡಿದ ಶಿಖಾ (610) ಹತ್ತನೇ ಸ್ಥಾನವನ್ನು ಗಳಿಸಿದ್ದಾರೆ.

  ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 2019ರ ಫೆಬ್ರವರಿಯಲ್ಲಿ ಶಿಖಾ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕ ಐದನೇ ಸ್ಥಾನ ಗಳಿಸಿದ್ದರು.

 ಆಲ್‌ರೌಂಡರ್‌ಗಳಲ್ಲಿ 343 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ್ತಿ ದೀಪ್ತಿ. ಆಸ್ಟ್ರೇಲಿಯದ ಅಲಿಸಾ ಹೀಲಿ ತನ್ನ ವೃತ್ತಿಜೀವನದ ಅತ್ಯುತ್ತಮ ಮೂರನೇ ಸ್ಥಾನವನ್ನು ಮತ್ತೊಮ್ಮೆ ಪಡೆದಿದ್ದಾರೆ. ಈ ಹಿಂದೆ ಅವರು 2019ರ ಅಕ್ಟೋಬರ್‌ನಲ್ಲಿ ಮೂರನೇ ಸ್ಥಾನವನ್ನು ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News