ರೈತ ಮುಖಂಡರಿಗೆ ಥಳಿತ ಪ್ರಕರಣ: ಸಿಪಿಐ, ತಹಶೀಲ್ದಾರ್ ಗೆ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

Update: 2021-04-07 18:02 GMT

ಬೆಂಗಳೂರು, ಎ.7: ದಿನಬಳಕೆ ವಸ್ತುಗಳನ್ನು ಜಪ್ತಿ ಮಾಡಲು ಮುಂದಾದ ಅಧಿಕಾರಿಗಳನ್ನು ತಡೆದಿದ್ದಕ್ಕೆ ರೈತ ಮುಖಂಡರನ್ನು ಲಾಕಪ್‍ನಲ್ಲಿ ಹಾಕಿ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಸಿಪಿಐ ಕಾಶೀನಾಥ್ ಹಾಗೂ ತಹಶೀಲ್ದಾರ್ ರಾಮಾಚಾರಿ ಎನ್ನುವವರಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ರಾಯಚೂರು 3ನೆ ಜೆಎಂಎಫ್‍ಸಿ ಕೋರ್ಟ್ ತೀರ್ಪು ನೀಡಿದೆ.

1994ರ ಜೂ.1ರಂದು ಆರ್‍ಡಿಸಿಸಿ ಬ್ಯಾಂಕ್‍ನೊಂದಿಗೆ ತಡಕಲ್ ಗ್ರಾಮದ ರೈತರ ದಿನಬಳಕೆ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಲು ಮುಂದಾಗಿದ್ದರು. ಇದನ್ನು ತಡೆಯಲು ಯತ್ನಿಸಿದ್ದ ರಾಯಚೂರು ಜಿಲ್ಲೆಯ ಮಾನ್ವಿಯ ಹರವಿ ಗ್ರಾಮದ ರೈತ ಮುಖಂಡರಾದ ಶಂಕರಗೌಡ ಹಾಗೂ ಬಸನಗೌಡರನ್ನು ಲಾಕಪ್‍ನಲ್ಲಿ ಹಾಕಿ ಥಳಿಸಿ ಜೀವ ಬೆದರಿಕೆಯೊಡ್ಡಿದ್ದರು.

ಈ ಹಿನ್ನೆಲೆಯಲ್ಲಿ ಅಂದಿನ ಮಾನ್ವಿ ಸಿಪಿಐ ಕಾಶೀನಾಥ್ ಹಾಗೂ ಮಾನ್ವಿ ತಹಶೀಲ್ದಾರ್ ರಾಮಾಚಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾನ್ವಿಯ ಕವಿತಾಳ ಠಾಣೆ ಪೊಲೀಸರು ತನಿಖೆ ನಡೆಸಿ ಚಾರ್ಜ್‍ಶೀಟ್ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News