ಪ್ರಚೋದನಕಾರಿ ಹೇಳಿಕೆ: ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು

Update: 2021-04-08 17:48 GMT

ಬೆಂಗಳೂರು, ಎ.8: ಇಸ್ಲಾಂ ಹಾಗೂ ಕುರ್ಆನ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ವಿಎಚ್‍ಪಿ ಮುಖಂಡ ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಕಾನೂನು ಕ್ರಮಕ್ಕೆ ಸದ್ಭಾವನ ಸಾಮಾಜಿಕ ಸಂಸ್ಥೆ ವತಿಯಿಂದ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿಎಚ್‍ಪಿ ಮುಖಂಡ ಯತಿ ನರಸಿಂಹಾನಂದ ಸರಸ್ವತಿ ಮಾತನಾಡುತ್ತಾ, ಇಸ್ಲಾಂ ಧರ್ಮ, ಪವಿತ್ರ ಕುರ್ಆನ್ ಹಾಗೂ ಪ್ರವಾದಿ ಮುಹಮ್ಮದ್‍ರವರ ವಿರುದ್ಧ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ಇವರ ವಿರುದ್ಧ ಎಫ್‍ಐಅರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಭಾರತವು ಭಾವೈಕ್ಯತೆಯಲ್ಲಿ ಏಕತೆಯನ್ನು ಹೊಂದಿರುವ ವಿಶಾಲ ದೇಶ. ಇಲ್ಲಿ ಧರ್ಮದ ಸಭ್ಯತೆ, ಸಂಸ್ಕೃತಿ, ಸಹಬಾಳ್ವೆ ಮತ್ತು ಶಾಂತಿಯುತವಾಗಿ ಬಾಳು ಬದುಕುವ ಅವಕಾಶ ಹೊಂದಿರುವ ದೇಶವಾಗಿದೆ. ಇಂತಹ ಸೌಹಾರ್ದತೆಯ ದೇಶದಲ್ಲಿ ವಿಎಚ್‍ಪಿ ಮುಖಂಡ ನರಸಿಂಹಾನಂದ ಸರಸ್ವತಿ ಎರಡು ಕೋಮುಗಳ ಮಧ್ಯೆ ದ್ವೇಷ ಬಿತ್ತುವಂತಹ ಹೇಳಿಕೆ ನೀಡಿದ್ದಾರೆ. ಇವರ ವಿರುದ್ದ ಕಾನೂನು ಕ್ರಮ ಜರುಗಿಸುವ ಮೂಲಕ ಸೌರ್ಹಾದತೆಯನ್ನು ಎತ್ತಿ ಹಿಡಿಯಬೇಕೆಂದು ಮನವಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News