ಕೋವಿಡ್ ನಿಯಮ ಉಲ್ಲಂಘನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಉದ್ದಿಮೆಗಳು ಬಂದ್

Update: 2021-04-09 17:36 GMT

ಬೆಂಗಳೂರು, ಎ.9: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದ ಸುಮಾರು 28 ಉದ್ದಿಮೆಗಳನ್ನು ಮುಚ್ಚಿಸಿ ಪಾಲಿಕೆಯ ಆರೋಗ್ಯಾಧಿಕಾರಿ ಆದೇಶಿಸಿದ್ದಾರೆ.

ಬಂದ್ ಮಾಡಿ ಆದೇಶಿಸಿರುವ ಉದ್ದಿಮೆಗಳಲ್ಲಿ ಸುರಕ್ಷಿತ ಅಂತರ ಕಾಪಾಡದಿರುವುದು, ಮಾಸ್ಕ್ ಧರಿಸದೆ ಇರುವುದು, ಸ್ಯಾನಿಟೈಸರ್ ಬಳಸದೆ ಇರುವುದು ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡದಿರುವ ಹೊಟೇಲ್, ರೆಸ್ಟೋರೆಂಟ್ ಬಾರ್, ಬೇಕರಿಗಳ ಮೇಲೆ ದಾಳಿ ಕ್ರಮ ಕೈಗೊಳ್ಳಲಾಗಿದೆ.

ಯಲಹಂಕದಲ್ಲಿ-1, ಮಹದೇವಪುರ-3, ಬೆಂಗಳೂರು ಪಶ್ಚಿಮ-5, ಬೆಂಗಳೂರು ದಕ್ಷಿಣ-4, ಬೊಮ್ಮನಹಳ್ಳಿ-3, ಬೆಂಗಳೂರು ಪೂರ್ವ-11, ರಾಜರಾಜೇಶ್ವರಿ ನಗರ-1 ಉದ್ದಿಮೆಗಳನ್ನು ಬಂದ್ ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News