ತೃಣಮೂಲ ಸರ್ವೇಯಲ್ಲಿ ಬಿಜೆಪಿಗೆ ಗೆಲುವು: ಬಿಜೆಪಿ ಬಿಡುಗಡೆ ಮಾಡಿದ ತನ್ನ ಆಡಿಯೋ ಬಗ್ಗೆ ಪ್ರಶಾಂತ್ ಕಿಶೋರ್ ಹೇಳಿದ್ದೇನು?

Update: 2021-04-10 07:13 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಇಂದು ನಾಲ್ಕನೇ ಹಂತದ ಚುನಾವಣೆ ಆರಂಭಗೊಂಡಿರುವ ನಡುವೆಯೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ "ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಮಮತಾ ಬ್ಯಾನರ್ಜಿಯವರಷ್ಟೇ ಜನಪ್ರಿಯರಾಗಿದ್ದಾರೆ ಹಾಗೂ ಟಿಎಂಸಿ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕಂಡುಕೊಂಡಿದೆ" ಎಂದು ಹೇಳಿರುವುದು ಕೇಳಿಸುವ ಆಡಿಯೋ ಕ್ಲಿಪ್ ಪೋಸ್ಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆಯಲ್ಲದೆ ಮಾಲವಿಯ ಅವರ ಟ್ವೀಟ್ ಹಾಗೂ ಪೋಸ್ಟ್ ಗಳು ವೈರಲ್ ಆಗಿವೆ.

ಕೆಲ ಪತ್ರಕರ್ತರೊಂದಿಗೆ ಪ್ರಶಾಂತ್ ಕಿಶೋರ್ ಅವರು ಕ್ಲಬ್ ಹೌಸ್‍ನಲ್ಲಿ ಶುಕ್ರವಾರ ಸಂಜೆ ಮಾತನಾಡುವಾಗ ಹೀಗೆ ಹೇಳಿದ್ದರೆಂದು ಹೇಳಲಾಗಿದೆ. ಪ್ರಶಾಂತ್ ಕಿಶೋರ್ ಅವರು ರಾಜ್ಯದಲ್ಲಿನ ಧ್ರುವೀಕರಣ, ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಇರುವ ಆಕ್ರೋಶ ಹಾಗೂ ದಲಿತ ಮತಗಳು ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆನ್ನಲಾಗಿದೆ.

 "ಅದು ತೆರೆದಿದೆಯೇ? ಕ್ಲಬ್ ಹೌಸ್ ಕೊಠಡಿ ತೆರೆದಿದೆಯೆಂದು ಹಾಗೂ ಅವರು ಮಾತುಗಳನ್ನು ಕೆಲವೇ ಕೆಲವು ಲುಟ್ಯೆನ್ ಪತ್ರಕರ್ತರು ಮಾತ್ರವಲ್ಲದೆ ಸಾರ್ವಜನಿಕರೂ ಕೇಳುತ್ತಿದ್ದಾರೆಂದು ಮಮತಾ ಬ್ಯಾನರ್ಜಿ ಅವರ ತಂತ್ರಜ್ಞರಿಗೆ ತಿಳಿದ ಕ್ಷಣ,  ನಂತರ ಮೌನ, ಟಿಎಂಸಿಯ ಆಯ್ಕೆ ಸಾಧ್ಯತೆ ತಳ್ಳಿ ಹಾಕಲಾಯಿತು!" ಎಂದು ಅಮಿತ್ ಮಾಲವಿಯ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್ "ತಮ್ಮ ಪಕ್ಷದ ನಾಯಕರ ಮಾತುಗಳಿಗಿಂತ ನನ್ನ ಮಾತುಗಳನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳುತ್ತಿದೆಯೆಂದು ಖುಷಿಯಾಗಿದೆ. ಅವರು ನನ್ನ ಮಾತುಗಳ ಕೆಲ ಆಯ್ದ ಭಾಗಗಳನ್ನು ತೋರಿಸುವ ಬದಲು ಸಂಪೂರ್ಣ ಹೇಳಿಕೆಗಳನ್ನು ಶೇರ್ ಮಾಡುವ ಧೈರ್ಯ ತೋರಬೇಕು. ನಾನು ಈ ಹಿಂದೆ ಹೇಳಿದ ನನ್ನ ಮಾತುಗಳನ್ನು ಪುನರಾವರ್ತನೆ ಮಾಡುತ್ತಿದ್ದೇನೆ. ಬಂಗಾಳದಲ್ಲಿ ಬಿಜೆಪಿ 100 ಸೀಟು ದಾಟುವುದಿಲ್ಲ" ಎಂದು ಹೇಳಿದ್ದಾರೆ.

 "ಮತ ಇದ್ದರೆ ಅದು ಮೋದಿಯ ಹೆಸರಿನಲ್ಲಿ ಹಿಂದು ಹೆಸರಿನಲ್ಲಿ, ಮತುವಾಗಳು ಹೆಚ್ಚಾಗಿ ಬಿಜೆಪಿಗೆ ಮತ ನೀಡುತ್ತಾರೆ. 75 ಮತಗಳು ಬಿಜೆಪಿಗೆ ದೊರೆತರೆ 25 ತೃಣಮೂಲಕ್ಕೆ ದೊರೆಯಬಹುದು. ನಾವು ಯಾರು ಸರಕಾರ ಮಾಡಬಹುದೆಂದು ಸಮೀಕ್ಷೆ ನಡೆಸಿದಾಗ ಹೆಚ್ಚಾಗಿ ಬಿಜೆಪಿ" ಎಂದು  ಅವರು ಹೇಳುವುದು ಕೇಳಿಸುತ್ತದೆ.

ಹಾಗಾದರೆ ತೃಣಮೂಲಕ್ಕೆ ಯಾರು ಮತ ನೀಡುತ್ತಾರೆಂದು ಪ್ರಶ್ನಿಸಿದಾಗ "ಶೇ50-55ರಷ್ಟು ಹಿಂದುಗಳು  ಬಿಜೆಪಿಗೆ ಮತ ಹಾಕುತ್ತಾರೆ" ಎನ್ನುವಷ್ಟರಲ್ಲಿ ಆಡಿಯೋ ಕಟ್ ಆಗುತ್ತದೆ. ಇದೊಂದು ಖಾಸಗಿ ಮಾತುಕತೆಯಲ್ಲ ಎಂದು ತಿಳಿಯದೆ ಪ್ರಶಾಂತ್ ಕಿಶೋರ್ ಬಹಳಷ್ಟು ಮಾತನಾಡಿದರೆಂದು ಅಮಿತ್ ಮಾಲವಿಯ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News