ಕೋವಿಡ್ ಸ್ವ್ಯಾಬ್ ಟೆಸ್ಟ್ ಕಿಟ್‍ಗಳ ದುರುಪಯೋಗ ಪ್ರಕರಣ: ವೈದ್ಯಾಧಿಕಾರಿ ಅಮಾನತು

Update: 2021-04-11 14:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.11: ಕೋವಿಡ್ ಪರೀಕ್ಷೆಯ ವೇಳೆ ಸ್ವ್ಯಾಬ್ ಟೆಸ್ಟ್ ಕಿಟ್‍ಗಳ ದುರುಪಯೋಗ ಹಿನ್ನೆಲೆಯಲ್ಲಿ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರೇಮಾನಂದ್‍ರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ಕೊಡಿಗೇಹಳ್ಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎ.7ರಂದು ಸ್ವ್ಯಾಬ್ ಟೆಸ್ಟ್ ಕಿಟ್‍ಗಳನ್ನು ದುರುಪಯೋಗಪಡಿಸಿದ ಹಿನ್ನೆಲೆಯಲ್ಲಿ ಸ್ವ್ಯಾಬ್ ಕಲೆಕ್ಟರ್ ಗಳಾದ ನಾಗರಾಜು ಹಾಗೂ ಹೇಮಂತ್ ಅವರನ್ನು ಕೆಲಸದಿಂದ ವಜಾಗೊಳಿಸಿ, ಇವರ ವಿರುದ್ಧ ಕೊಡಿಗೇಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ವೈದ್ಯಾಧಿಕಾರಿ ವಿರುದ್ಧ ಕಾರಣ ಕೇಳಿ ಎ.8ರಂದು ನೋಟಿಸ್ ನೀಡಲಾಗಿತ್ತು. ಅದರಂತೆ, ಯಲಹಂಕ ವಲಯದ ಕೊಡಿಗೇಹಳ್ಳಿ ಆಡಳಿತ ವೈದ್ಯಾಧಿಕಾರಿ ಡಾ. ಪ್ರೇಮಾನಂದ್‍ರನ್ನು ಸೇವೆಯಿಂದ ಇಲಾಖಾ ವಿಚಾರಣೆ ನಿರೀಕ್ಷಿಸಿ ಮುಖ್ಯ ಆಯುಕ್ತರ ಆದೇಶದಂತೆ ಅಮಾನತುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News