ಚಿಕಿತ್ಸೆ ನಿರಾಕರಿಸಿದ ಬೆಂಗಳೂರಿನ ಖಾಸಗಿ ಆಸ್ಪತ್ರೆ: ಪಾದಚಾರಿ ರಸ್ತೆಯಲ್ಲೇ ಮಲಗಿದ ಕೊರೋನ ಸೋಂಕಿತೆ

Update: 2021-04-13 13:27 GMT

ಬೆಂಗಳೂರು, ಎ.13: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ 2ನೇ ಅಲೆ ತೀವ್ರ ವೇಗ ಪಡೆದುಕೊಂಡಿರುವ ನಡುವೆ ಕೋವಿಡ್ ರೋಗಿಯು ಚಿಕಿತ್ಸೆಗೆ ಪರದಾಡಿ ಕೊನೆಗೆ ಪಾದಚಾರಿ ರಸ್ತೆಯಲ್ಲೇ ಮಲಗಿರುವ ಘಟನೆ ವರದಿಯಾಗಿದೆ.

ರವಿವಾರ 58 ವರ್ಷದ ಮಹಿಳೆಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಿನ್ನೆ (ಸೋಮವಾರ) ಮಹಿಳೆಗೆ ಸೋಂಕು ದೃಢಪಟ್ಟಿದೆ. ಆದರೆ, ಇಂದು ಡಯಾಲಿಸಿಸ್​ಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಚಿಕಿತ್ಸೆಗೆ ದಾಖಲಿಸದೆ ಮಹಿಳೆಯನ್ನು ಹೊರ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ತದನಂತರ, ಸೋಂಕಿತ ಮಹಿಳೆಯು ಪಾದಚಾರಿ ರಸ್ತೆಯಲ್ಲೇ ಮಲಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು, ಈ ಬಗ್ಗೆ ಪ್ರಶ್ನಿಸಿದರೆ ಆಸ್ಪತ್ರೆಯು ‘ನಮ್ಮದು ಕೋವಿಡ್‌ಗೆ ಮೀಸಲಾಗಿರುವ ಆಸ್ಪತ್ರೆ ಅಲ್ಲ. ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾರಣ ತಿಳಸಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News