ಬೆಂಗಳೂರಿನ ಒಂದೇ ಹೋಟೆಲ್ ನಲ್ಲಿ 19 ಮಂದಿಗೆ ಕೋವಿಡ್ ಪಾಸಿಟಿವ್

Update: 2021-04-13 14:43 GMT

ಬೆಂಗಳೂರು, ಎ.13: ಬೆಂಗಳೂರಿನ ಜೆಪಿ ನಗರದ ಹೋಟೆಲ್‌ವೊಂದರಲ್ಲಿ 19 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಜೆಪಿ ನಗರದ ಚುಲ಼ಾ ಚೌಕಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ 55 ಮಂದಿಯ ಕೊರೋನ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 19 ಸಿಬ್ಬಂದಿಗೆ ಕೋವಿಡ್​ ತಗಲಿರುವುದು ಸ್ಪಷ್ಟವಾಗಿದೆ.

ಈ ಸಂಬಂಧ ಹೋಟೆಲ್‌ಗೆ ಭೇಟಿ ‌‌ನೀಡಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಸೋಂಕಿತರನ್ನು ಹೋಮ್ ಐಸೋಲೇಟ್ ಮಾಡಿದ್ದಾರೆ. ರೋಗ ಲಕ್ಷಣಗಳು ಹೆಚ್ಚಾದರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News