ವಾರದೊಳಗೆ ಆಡಲು ಸಿದ್ಧ : ವಿಲಿಯಮ್ಸನ್

Update: 2021-04-16 18:35 GMT

ಚೆನ್ನೈ: ಮೊಣಕೈ ಗಾಯದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್‌ನ ಮೊದಲ ಎರಡು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಂಡ ಬ್ಯಾಟ್ಸ್ ಮನ್ ನ್ಯೂಝಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಚೇತರಿಸಿಕೊಳ್ಳುತ್ತಿದ್ದಾರೆ. ವಾರದೊಳಗೆ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದು ಆಡುವ ವಿಶ್ವಾಸವನ್ನು ವಿಲಿಯಮ್ಸನ್ ವ್ಯಕ್ತಪಡಿಸಿದ್ದಾರೆ.

ಎಸ್‌ಆರ್‌ಎಚ್‌ನ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್ 30ರ ಹರೆಯದ ವಿಲಿಯಮ್ಸನ್ ಐಪಿಎಲ್‌ಗಿಂತ ಮುಂಚಿತವಾಗಿ ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸ್ವದೇಶಿ ಏಕದಿನ ಸರಣಿಯಿಂದ ಗಾಯದ ಕಾರಣದಿಂದ ಹೊರಗುಳಿದಿದ್ದರು.

ವಿಲಿಯಮ್ಸನ್ 11 ಇನಿಂಗ್ಸ್‌ಗಳಲ್ಲಿ 317 ರನ್ ಗಳಿಸಿ ಕಳೆದ ಋತುವಿನಲ್ಲಿ ಯುಎಇಯಲ್ಲಿ ಎಸ್‌ಆರ್‌ಎಚ್ ತಂಡವನ್ನು ಪ್ಲೇ-ಆಫ್‌ಗೆ ಕರೆದೊಯ್ದರು.

  ಈ ಋತುವಿನಲ್ಲಿ ಸನ್‌ರೈಸರ್ಸ್ ಆಡಿರುವ ಎರಡೂ ಪಂದ್ಯಗಳನ್ನು ಕಳೆದುಕೊಂಡಿದೆ. ವಿಲಿಯಮ್ಸನ್‌ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಶನಿವಾರ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News