ಕೆಂಪುಕೋಟೆ ಹಿಂಸಾಚಾರದ ಆರೋಪಿ ದೀಪ್ ಸಿಧು ಮತ್ತೆ ಬಂಧನ

Update: 2021-04-17 11:48 GMT

ಹೊಸದಿಲ್ಲಿ: ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ  ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದಿಲ್ಲಿ ನ್ಯಾಯಾಲಯದಿಂದ  ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ ದಿಲ್ಲಿ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ನಟ  ದೀಪ್ ಸಿಧು ಅವರನ್ನು ಮತ್ತೆ ಬಂಧಿಸಿದ್ದಾರೆ.

ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿ (ಎಎಸ್‌ಐ) ಸಲ್ಲಿಸಿದ ಎಫ್‌ಐಆರ್ (ಸಂಖ್ಯೆ 98/2020) ಗೆ ಸಂಬಂಧಿಸಿದಂತೆ ಮತ್ತೆ ಬಂಧನವಾಗಿದೆ. ಕೆಂಪುಕೋಟೆಯ ಮೇಲಿನ  ದಾಳಿಯ ಸಂದರ್ಭದಲ್ಲಿ ಪಾರಂಪರಿಕ ರಚನೆಯ ಕೆಲವು ಭಾಗಗಳಿಗೆ ಹಾನಿಯಾಗಿತ್ತು.

ಇದಕ್ಕೂ ಮೊದಲು ದಿಲ್ಲಿಯ ಸ್ಥಳೀಯ ನ್ಯಾಯಾಲಯವು ದೀಪ್ ಸಿಧುಗೆ ಜಾಮೀನು ನೀಡಿತ್ತು. ಗಣರಾಜ್ಯೋತ್ಸವದಂದು ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಟ್ರಾಕ್ಟರ್ ಮೆರವಣಿಗೆಯ ವೇಳೆ ಸಂಭವಿಸಿರುವ ಕೆಂಪು ಕೋಟೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 9 ರಂದು ದೀಪ್ ಸಿಧುವನ್ನು ಬಂಧಿಸಲಾಗಿತ್ತು.

ವಿಶೇಷ ನ್ಯಾಯಾಧೀಶೆ ನೀಲೋಫರ್ ಅಬಿದಾ ಪರ್ವೀನ್ ಅವರು ದೀಪ್ ಸಿಧು ಅವರಿಗೆ 30,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಜಾಮೀನು ಬಾಂಡ್  ಮೇರೆಗೆ  ಜಾಮೀನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News