ಕೋವಿಡ್ ಸೋಂಕು ಹೆಚ್ಚಳದ ನಡುವೆ ಉತ್ತರಪ್ರದೇಶದಲ್ಲಿ 2ನೇ ಹಂತದ ಪಂಚಾಯತ್ ಚುನಾವಣೆ

Update: 2021-04-19 06:03 GMT

ಲಕ್ನೊ: ಉತ್ತರಪ್ರದೇಶ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಮಧ್ಯೆ ಎರಡನೇ ಹಂತದ ಪಂಚಾಯತ್ ಚುನಾವಣೆ ಸೋಮವಾರ ನಡೆಯುತ್ತಿದೆ. 20 ಜಿಲ್ಲೆಗಳಲ್ಲಿ 2.23 ಲಕ್ಷ ಹೆಚ್ಚು ಸ್ಥಾನಗಳಿಗೆ 3.48 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಚುನಾವಣೆಯು ಸೋಮವಾರ ಸಂಜೆ 6ರ ತನಕ ಮತದಾನ ನಡೆಯಲಿದ್ದು, 3.23 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.   

ಒಟ್ಟು 4 ಹಂತದ ಮತದಾನದ ಎರಡನೇ ಹಂತದ ಮತದಾನದಲ್ಲಿಂದು ಲಕ್ನೊ, ವಾರಣಾಸಿ, ಅಮ್ರೋಹಾ, ಅಝಂಗಢ, ಇಟಾವಾ, ಇಟಹಾ, ಕನೌಜ್, ಗೊಂಡ, ಗೌತಮ್ ಬುದ್ದ ನಗರ, ಚಿತ್ರಕೂಟ್, ಪ್ರತಾಪ್ ಗಢ, ಬದೌನ್, ಬಾಗ್ ಪತ್, ಬಿಜ್ನೋರ್, ಮುಝಫರ್ ನಗರ, ಮೈನ್‍ಪುರಿ, ಮಹಾರಾಜಗಂಜ್, ಲಕ್ಷ್ಮೀಪುರ ಖೇರಿ, ಲಲಿತ್ ಪುರ್ ಹಾಗೂ ಸುಲ್ತಾನ್ ಪುರ್ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News