ಮೀನುಗಾರಿಕೆ ಬೋಟಿನಿಂದ 3,000 ಕೋ.ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ನೌಕಾಪಡೆ

Update: 2021-04-19 16:52 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.19: ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟೊಂದರಿಂದ ವಿದೇಶಿ ಮೂಲದ್ದೆಂದು ಶಂಕಿಸಲಾಗಿರುವ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 3,000 ಕೋ.ರೂ.ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ.

ಕೊಚ್ಚಿ ಸಮೀಪ ಸಮುದ್ರದಲ್ಲಿ ಗಸ್ತು ನಡೆಸುತ್ತಿದ್ದ ನೌಕಾಪಡೆಯ ‘ಸುವರ್ಣ’ ಹಡಗು ಶಂಕಾಸ್ಪದವಾಗಿ ಚಲಿಸುತ್ತಿದ್ದ ಮೀನುಗಾರಿಕೆ ಬೋಟನ್ನು ತಡೆದು ಶೋಧಿಸಿದಾಗ 300 ಕೆ.ಜಿ.ಗೂ ಅಧಿಕ ಮಾದಕ ದ್ರವ್ಯಗಳು ಪತ್ತೆಯಾಗಿವೆ. ಬೋಟನ್ನು ಕೊಚ್ಚಿ ಬಂದರಿಗೆ ತರಲಾಗಿದೆ ಎಂದು ರಕ್ಷಣಾ ವಕ್ತಾರರು ಸೋಮವಾರ ತಿಳಿಸಿದರು. ಆದರೆ ಮಾದಕ ದ್ರವ್ಯಗಳನ್ನು ಯಾವಾಗ ಮತ್ತು ಎಲ್ಲಿ ವಶಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಅವರು ಬಹಿರಂಗಗೊಳಿಸಲಿಲ್ಲ.

ಪ್ರಮಾಣ ಮತ್ತು ಮೌಲ್ಯದಲ್ಲಿ ಮಾತ್ರವಲ್ಲ,ಮಾದಕ ದ್ರವ್ಯ ಕಳ್ಳಸಾಗಾಣಿಕೆ ಮಾರ್ಗಗಳನ್ನು ಭೇದಿಸಿದ ಪ್ರಮುಖ ಪ್ರಕರಣ ಇದಾಗಿದೆ. ಈ ಮಾರ್ಗಗಳು ಮಕ್ರಾನ್ ತೀರದಿಂದ ಆರಂಭಗೊಂಡು ಭಾರತ, ಮಾಲ್ದೀವ್ಸ್ ಮತ್ತು ಶ್ರೀಲಂಕಾದತ್ತ ಸಾಗುತ್ತವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News