ಕೋವಿಡ್ ಎರಡನೆ ಅಲೆಯ ಭೀತಿ: ಬೆಂಗಳೂರು ಕರಗ ಉತ್ಸವ ರದ್ದು

Update: 2021-04-19 18:40 GMT

ಬೆಂಗಳೂರು, ಎ.19: ಕೋವಿಡ್ ಎರಡನೆ ಅಲೆಯ ಭೀತಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಭಾವೈಕ್ಯತೆಯ ಪ್ರತೀಕ, ಐತಿಹಾಸಿಕವಾದ ಕರಗ ಶಕ್ತ್ಯೊತ್ಸವ ಹಾಗೂ ಶ್ರಿ ಧರ್ಮರಾಯಸ್ವಾಮಿ ಮಹಾರಥೋತ್ಸವ ಈ ಬಾರಿ ರದ್ದುಗೊಳಿಸಲಾಗಿದೆ.

ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ, ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಳದಿಂದಾಗಿ ರಾಜ್ಯ ಸರಕಾರ ಈಗಾಗಲೇ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ರದ್ದುಗೊಳಿಸಿದೆ. ರಾತ್ರಿ ಕರ್ಫ್ಯೂ ಸಹ ಜಾರಿಯಲ್ಲಿದೆ. ಹಾಗಾಗಿ, ಸರಕಾರದ ಆದೇಶದನ್ವಯ ಶ್ರೀ ಧರ್ಮರಾಯ ಸ್ವಾಮಿ ದೇವಾಲದಯಲ್ಲಿ ಪ್ರಸ್ತುತ ಸಾಲಿನಲ್ಲಿ ನಡೆಸಲಿರುವ ದ್ರೌಪದಿ ಕರಗ ಶಕ್ತ್ಯೋತ್ಸವ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಿರುವುದಿಲ್ಲ. ಸಾರ್ವಜನಿಕರು, ಭಕ್ತಾಧಿಗಳು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News