ಎ.21ರಂದು ನಡೆಯಬೇಕಾಗಿದ್ದ ಬೆಂಗಳೂರು ನಗರ ವಿವಿ ಪರೀಕ್ಷೆ ಮುಂದೂಡಿಕೆ

Update: 2021-04-20 14:58 GMT

ಬೆಂಗಳೂರು, ಎ.20: ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಎ.21ರಂದು ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ.

ಬೆಂಗಳೂರ ನಗರ ವಿಶ್ವವಿದ್ಯಾಲಯದ 3 ಹಾಗೂ 5ನೇ ಸೆಮಿಸ್ಟರ್ ಎಂಸಿಎ ಕೋರ್ಸ್ ಹಾಗೂ 3ನೇ ಸೆಮಿಸ್ಟರ್ ಎಂಎಡ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದೆಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News