ಕೋವಿಡ್ ನಡುವೆ ಭಾರತದಿಂದ ರಫ್ತಾದ ಆಕ್ಸಿಜನ್ ಪ್ರಮಾಣದಲ್ಲಿ ಶೇ.734 ಹೆಚ್ಚಳ

Update: 2021-04-21 08:36 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ 2ನೇ ಅಲೆಯಲ್ಲಿ ಭಾರತದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮಂದಿ ಉಸಿರಾಟ ಸಮಸ್ಯೆಯಿಂದ ಎದುರಿಸುತ್ತಿರುವುದರಿಂದ ಆಕ್ಸಿಜನ್ ಬೇಡಿಕೆ ಹೆಚ್ಚಾಗಿರುವ ನಡುವೆಯೇ ಕಳೆದೊಂದು ವರ್ಷದಲ್ಲಿ ಭಾರತದಿಂದ ರಫ್ತಾದ ಆಕ್ಸಿಜನ್ ಪ್ರಮಾಣ ದ್ವಿಗುಣಗೊಂಡಿರುವುದು ಸರಕಾರಿ ಅಂಕಿಅಂಶಗಳಿಂದ ಬಹಿರಂಗಗೊಂಡಿದೆ ಎಂದು ndtv.com ವರದಿ ಮಾಡಿದೆ.

ಎಪ್ರಿಲ್ 2020 ಹಾಗೂ ಜನವರಿ 2021ರ ನಡುವೆ ಭಾರತ 9,000 ಮೆಟ್ರಿಕ್ ಟನ್‍ಗೂ ಅಧಿಕ ಆಕ್ಸಿಜನ್ ರಫ್ತುಗೊಳಿಸಿದೆ. ಆರ್ಥಿಕ ವರ್ಷ 2020ರಲ್ಲಿ ಭಾರತ ಕೇವಲ 4,500 ಮೆಟ್ರಿಕ್ ಟನ್  ಆಕ್ಸಿಜನ್ ರಫ್ತುಗೊಳಿಸಿದ್ದರೆ ನಂತರ ಅದರ ಎರಡು ಪಟ್ಟು ಹೆಚ್ಚು ಆಕ್ಸಿಜನ್ ರಫ್ತುಗೊಂಡಿದೆ.

ಜನವರಿ 2020ರ ನಂತರ ಭಾರತ 353 ಮೆಟ್ರಿಕ್ ಟನ್ ಆಕ್ಸಿಜನ್ ರಫ್ತುಗೊಳಿಸಿದ್ದರೆ ಈ ವರ್ಷದ ಜನವರಿಯೊಳಗಾಗಿ ಶೇ.734ರಷ್ಟು ಹೆಚ್ಚು ರಫ್ತುಗೊಂಡಿದೆ.

ಡಿಸೆಂಬರ್ 2020ರಲ್ಲಿ ದೇಶ 2,193 ಟನ್ ಆಕ್ಸಿಜನ್ ರಫ್ತುಗೊಳಿಸಿದ್ದು ಇದು ಡಿಸೆಂಬರ್ 2019ರಲ್ಲಿ ರಫ್ತುಗೊಳಿಸಿದ 538 ಮೆಟ್ರಿಕ್ ಟನ್‍ಗೆ ಹೋಲಿಸಿದಾಗ ಶೇ308ರಷ್ಟು ಏರಿಕೆಯಾಗಿದೆ. ಫೆಬ್ರವರಿ ಹಾಗೂ ಮಾರ್ಚ್ 2021ರಲ್ಲಿ ಎಷ್ಟು ಆಕ್ಸಿಜನ್ ರಫ್ತುಗೊಂಡಿದೆ ಎಂಬ ಕುರಿತ ಅಂಕಿಅಂಶ ಲಭ್ಯವಾಗಿಲ್ಲ.

ಹಲವಾರು ರಾಜ್ಯಗಳು ಆಕ್ಸಿಜನ್ ಕೊರತೆಯಿದೆಯೆಂದು ದೂರುತ್ತಿರುವ ನಡುವೆ ಸರಕಾರದ ನೀತಿ ಹಲವು  ಪ್ರಶ್ನೆಗಳನ್ನೆತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News