ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ : ಕನಿಷ್ಠ ನಾಲ್ಕು ಮಂದಿ ಮೃತ್ಯು

Update: 2021-04-22 04:07 GMT

ಕ್ವೆಟ್ಟಾ (ಪಾಕಿಸ್ತಾನ): ನೈರುತ್ಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಚೀನಿ ರಾಯಭಾರಿಗಳು ಇದ್ದ ಹೋಟೆಲ್‌ನಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಪ್ರಮುಖ ಐಷಾರಾಮಿ ಹೋಟೆಲ್ ಸರಣಿಯಾಗಿರುವ ಸೆರೇನಾ ಹೋಟೆಲ್‌ನ ಕಾರು ಪಾರ್ಕಿಂಗ್ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದೆ.

"ಸ್ಫೋಟದಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ" ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ. ಇದು ಉಗ್ರರ ಕೃತ್ಯ ಎಂದು ಅವರು ತಿಳಿಸಿದ್ದಾರೆ.

ಚೀನಾದ ರಾಯಭಾರಿ ಸೇರಿದಂತೆ ಪ್ರಮುಖ ನಾಲ್ಕು ಮಂದಿ ರಾಜತಾಂತ್ರಿಕ ಸಿಬ್ಬಂದಿ ಈ ಹೋಟೆಲ್‌ನಲ್ಲಿ ತಂಗಿದ್ದರು. ಈ ಸ್ಫೋಟ ಸಂಭವಿಸಿದಾಗ ರಾಯಭಾರಿ, ಸಭೆಗಾಗಿ ಹೊರ ತೆರಳಿದ್ದರು ಎಂದು ಅವರು ವಿವರಿಸಿದ್ದಾರೆ.

ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಡಿ ಕೋಟ್ಯಂತರ ಡಾಲರ್ ಬಂಡವಾಳ ಈ ಭಾಗಕ್ಕೆ ಹರಿದಿದ್ದರೂ, ಇದರ ಪ್ರಯೋಜನ ಸ್ಥಳೀಯರಿಗೆ ಸಿಗುತ್ತಿಲ್ಲ. ಬಹುತೇಕ ಉದ್ಯೋಗಗಳು ಹೊರಗಿನವರಿಗೆ ಸಿಗುತ್ತಿವೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News