ಕರ್ಫ್ಯೂ ಸಮಯದಲ್ಲಿ ಅಗತ್ಯ ಚಟುವಟಿಕೆಗಳಿಗಾಗಿ 500 ಸಾರಿಗೆ ಬಸ್ ಸಂಚಾರ
Update: 2021-04-23 20:33 IST
ಬೆಂಗಳೂರು, ಎ.23: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂದು(ಎ.23) ರಾತ್ರಿ 9ರಿಂದ ಸೋಮವಾರ(ಎ.26) ಬೆಳಗ್ಗೆ 6ರವರೆಗೆ ಕರ್ಫ್ಯೂ ಘೋಷಿಸಿರುವುದರಿಂದ ಬಿಎಂಟಿಸಿ ವತಿಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ 450ರಿಂದ 500 ಸಾಮಾನ್ಯ ಸಾರಿಗೆ ಬಸ್‍ಗಳು ಸಂಚರಿಸಲಿವೆ.
ನಿಷೇಧಿತವಲ್ಲದ ಕೈಗಾರಿಕೆಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಅನುಕೂಲಕ್ಕಾಗಿ ಸಾರಿಗೆ ಬಸ್‍ಗಳು ಸಂಚರಿಸಲಿವೆ. ಹಾಗೆಯೇ ವಿಮಾನಯಾನ ಪ್ರಯಾಣಿಕರಿಗಾಗಿ ಎಚ್‍ಎಎಲ್ ಮುಖ್ಯ ರಸ್ತೆಯಿಂದ-3, ಬನಶಂಕರಿ ಟಿಟಿಎಂಸಿಯಿಂದ-6, ಕಾಡುಗೋಡಿ ಬಸ್ ನಿಲ್ದಾಣದಿಂದ-3, ಎಲೆಕ್ಟ್ರಾನಿಕ್ ಸಿಟಿಯಿಂದ-12, ಚಂದಾಪುರದಿಂದ -2, ಕೆಂಪೇಗೌಡ ಬಸ್ ನಿಲ್ದಾಣದಿಂದ-15 ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ- 7 ಬಸ್‍ಗಳು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.