×
Ad

ಬೆಂಗಳೂರು: ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಡಿದ ಸಾಲು ಮರದ ತಿಮ್ಮಕ್ಕ

Update: 2021-04-23 21:54 IST

ಬೆಂಗಳೂರು, ಎ.23: ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ಚಿಕಿತ್ಸೆಗೆಂದು ದಾಖಲಾಗಬೇಕಿದ್ದ ಸಾಲು ಮರದ ತಿಮ್ಮಕ್ಕನವರಿಗೆ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಬೆಡ್ ಸಮಸ್ಯೆ ಎದುರಾಗಿ ಪರದಾಟ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

ಬಚ್ಚಲು ಮನೆಯಲ್ಲಿ ಬಿದ್ದು ಬೆನ್ನು ಮೂಳೆ ಮುರಿತವಾಗಿದ್ದ ಸಾಲು ಮರದ ತಿಮ್ಮಕ್ಕನವರಿಗೆ ಇತ್ತಿಚೆಗೆ ಶಸ್ತ್ರಚಿಕಿತ್ಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಅವರಿಗೆ ಬೆನ್ನು ನೋವು ಉಲ್ಬಣಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಸಮಸ್ಯೆ ಎದುರಾಗಿದ್ದು, ಸಾಲುಮರದ ತಿಮ್ಮಕ್ಕ ಕೂಡ ಹಾಸಿಗೆಗಾಗಿ ಪರದಾಡುವಂತಾಯಿತು.

ತಿಮ್ಮಕ್ಕನವರು ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಹಾಸಿಗಾಗಿ ಪರದಾಟ ನಡೆಸಿದ್ದಾರೆ ಎನ್ನಲಾಗಿದೆ.

ನಾನ್ ಕೋವಿಡ್ ಬೆಡ್ ಹೊಂದಿಸಲು ವೈದ್ಯರೂ ಎಲ್ಲ ಪ್ರಯತ್ನ ನಡೆದಿದ್ದಾರೆ. ಆದರೆ, ಕೋವಿಡ್ ರೋಗಿಗಳು ತುಂಬಿ ಹೋಗಿರುವುದರಿಂದ ವೈದ್ಯರಿಂದಲೂ ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News