×
Ad

ಬೆಂಗಳೂರು: ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಕೊರೋನ ವಾರಿಯರ್ ಕೋವಿಡ್‍ಗೆ ಬಲಿ

Update: 2021-04-24 21:59 IST

ಬೆಂಗಳೂರು, ಎ.24: ನಗರದಲ್ಲಿ ಸ್ವಾಬ್ ಸಂಗ್ರಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೊರೋನ ವಾರಿಯರ್ ಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಕೋವಿಡ್‍ಗೆ ಬಲಿಯಾಗಿದ್ದಾರೆ.

ನಗರದ ಮರ್ಸಿಟೌನ್ ಆರೋಗ್ಯ ಕೇಂದ್ರದ ಸ್ವಾಬ್ ಕಲೆಕ್ಟರ್ ಆಗಿದ್ದ ಗೀತಾ(35) ಸಾವನಪ್ಪಿರುವ ಕೊರೋನ ವಾರಿಯರ್ ಆಗಿದ್ದಾರೆ. ಪ್ರತಿದಿನ ನೂರಾರು ಮಂದಿಯಿಂದ ಸ್ವಾಬ್ ಕಲೆಕ್ಟ್ ಮಾಡುತ್ತಿದ್ದ ಇವರು, ಸೋಂಕಿಗೆ ತುತ್ತಾಗಿದ್ದಾರೆ. ಆದರೆ, ಇವರ ಚಿಕಿತ್ಸೆಗೆ 4-5 ಆಸ್ಪತ್ರೆಗಳನ್ನು ಸುತ್ತಾಡಿದರೂ ಹಾಸಿಗೆ ಸಿಗಲಿಲ್ಲ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪೋಷಕರ ಆಕ್ರೋಶ: ನಮ್ಮ ಮಗಳು ಪ್ರತಿದಿನ ಕೋರೋನ ವಾರಿಯರ್ ಆಗಿ ಶ್ರಮಿಸುತ್ತಿದ್ದಳು. ಆದರೆ, ಅವಳಿಗೆ ಕೊರೋನ ಸೋಂಕು ತಗಲಿದಾಗ ಆಕೆಯನ್ನು ಉಳಿಸಿಕೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ. ನನ್ನ ಮಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದ ಮೇಲೆ ಆಕೆಯನ್ನು ಯಾಕೆ ಕೊರೋನ ವಾರಿಯರ್ ಆಗಿ ನೇಮಿಸಿಕೊಳ್ಳಬೇಕಿತ್ತೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News