ಮಹಾವೀರರ ಜಯಂತಿ: ಸಿಎಂ ಪುಷ್ಪ ನಮನ
ಬೆಂಗಳೂರು, ಎ. 25: ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ ಸಮಾರಂಭವು ಜೈನ ಯುವ ಸಂಘಟನೆ ದ್ವಾರ ಡಿಜಿಟಲ್ ಮಾಧ್ಯಮದಿಂದ ಆಚರಿಸಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪರವರು ತಮ್ಮ ಕಾರ್ಯಾಲಯದಲ್ಲಿ ಭಗವಾನ್ ಮಾಹವಿರವರ ಚಿತ್ರವನ್ನು ಪುಷ್ಪ ನಮನ ಸಲ್ಲಿಸಿ ಎಲ್ಲರಿಗೂ ಶಾಂತಿ ನೆಮ್ಮದಿಯ ಭಾವನೆ ಮೂಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ರವಿವಾರ ಭಗವಾನ್ ಮಹಾವೀರ ಅವರ 2620ನೆಯ ಜನ್ಮ ಕಲ್ಯಾಣ ಮಹೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಮಹಾವೀರರ ಅನುಯಾಯಿಗಳು ತಮ್ಮ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ಭಾವನೆಯಿಂದ ಆಚರಿಸಿದ್ದಾರೆ. ಜೈನ ಯುವ ಸಂಘಟನೆ ಅಧ್ಯಕ್ಷ ರೂಪಚಂದ್ ಕುಮಾಟ್, ಭಗವಾನ್ ಮಹಾವೀರ ಸಂದೇಶವನ್ನು ಸಂಪೂರ್ಣ ವಿಶ್ವಕ್ಕೆ ಬೇಕಾಗಿದೆ ಎಂದರು.
ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿ ಕರುಣೆ ದಯೆ, ಧೈರ್ಯ, ನೈತಿಕತೆ, ಪ್ರಾಮಾಣಿಕತೆ ಹಾಗೂ ಮೈತ್ರಿಭಾವದಿಂದ ಜೀವನವನ್ನು ಸಲ್ಲಿಸಬೇಕು. ಪ್ರತಿಯೊಬ್ಬರು ದೇಶಕ್ಕಾಗಿ ಮಾನವತೆಯನ್ನು ಕಾಪಾಡಬೇಕು ಎಂದು ಹೇಳಿದರು.
ಜೈನ ಯುವ ಸಂಘಟನೆಯ ಮುಖೇಶ್ ಬಾಬೆಲ್, ಜೈನ ಸಂಘಟನೆ ಮಾಡುವ ಕೆಲಸವ ಬಗೆ ಮಾಹಿತಿ ನೀಡಿದರು. ಜೈನ ಯುವ ಸಂಘಟನೆ ಬೆಂಗಳೂರಿನಲ್ಲಿ 32 ವರ್ಷಗಳ ಕಾಲ ಹಿಂದೆ ಸಂಪೂರ್ಣ ಜನಸಮುದಾಯ ಒಂದಾಗಿ ಅವರ ಜನ್ಮ ಕಲ್ಯಾಣವನ್ನು ಆಚರಿಸುತ್ತಾ ಬರುತ್ತಿದ್ದಾರೆ. ದಿಗಂಬರ, ಶ್ವೇತಂಬರ ಎಲ್ಲ ಸೇರಿ ಒಂದೇ ಸ್ಥಳದಲ್ಲಿ ಆಚರಿಸಿ ಹರ್ಷವನ್ನು ಪಡುತ್ತಿದ್ದಾರೆ.