ಬಿಹಾರ ಕೋವಿಡ್ ಪರಿಸ್ಥಿತಿಯನ್ನು ಬಿಚ್ಚಿಟ್ಟ ರಾಜ್ಯ ಬಿಜೆಪಿ ಅಧ್ಯಕ್ಷ

Update: 2021-05-01 07:57 GMT

ಪಾಟ್ನಾ: ಬಿಹಾರದಲ್ಲಿ ಕೋವಿಡ್ ಪರಿಸ್ಥಿತಿ ತೀರಾ ಗಂಭೀರವಾಗಿದ್ದು ಅಗತ್ಯ ಸೌಲಭ್ಯಗಳಾದ ಬೆಡ್ ಮತ್ತು ಮೆಡಿಕಲ್ ಆಕ್ಸಿಜನ್  ಮುಗಿಯುತ್ತಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ  ಹಾಗೂ ಸಂಸದ ಸಂಜಯ್ ಜೈಸ್ವಾಲ್ ಹೇಳಿದ್ದಾರೆ. ಪರಿಸ್ಥಿತಿ ಅದೆಷ್ಟು ದುಸ್ತರವಾಗಿದೆಯೆಂದರೆ ವೈದ್ಯರೂ ಆಗಿರುವ ನನ್ನ ಆತ್ಮೀಯ ಸ್ನೇಹಿತರೊಬ್ಬರಿಗೆ ಕೂಡ ಸಹಾಯ ಮಾಡುವುದು ಅಸಾಧ್ಯವಾಗಿ ಅವರು ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

"ಕೊರೋನವೈರಸ್‍ಗೆ ಅತ್ಯುತ್ತಮ ಚಿಕಿತ್ಸೆಯೆಂದರೆ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸುವುದು. ಆದರೆ ದುರದೃಷ್ಟವಶಾತ್ ಜನರು ಇನ್ನೂ ಈ ಮಾರಕ ವೈರಸ್ ಒಡ್ಡಿರುವ ಬೆದರಿಕೆಯನ್ನು ಅರ್ಥ ಮಾಡುತ್ತಿಲ್ಲ,'' ಎಂದು  ವೈದ್ಯರೂ ಆಗಿರುವ ಜೈಸ್ವಾಲ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಕೋವಿಡ್ ಎರಡನೇ ಅಲೆಯಲ್ಲಿ ತಾವು ತಮಗೆ ತಿಳಿದಿರುವ ಹಲವು ವ್ಯಕ್ತಿಗಳನ್ನು ಕಳೆದುಕೊಂಡಿದ್ದಾಗಿಯೂ ಅವರು ಬರೆದುಕೊಂಡಿದ್ದಾರೆ.

ತಮ್ಮ ಸಂಸದೀಯ ಕ್ಷೇತ್ರ ಚಂಪಾರನ್‍ನಲ್ಲೂ ಪರಿಸ್ಥಿತಿ ಶೋಚನೀಯವಾಗಿದೆ, ಎಷ್ಟು ಹೆಚ್ಚುವರಿ ಸವಲತ್ತುಗಳ ಏರ್ಪಾಟು ಮಾಡಿದರೂ ಸಾಕಾಗುತ್ತಿಲ್ಲ. ಪಾಸಿಟಿವಿಟಿ ಪ್ರಮಾಣ ಶೇ30ರಷ್ಟು ತಲುಪಿದೆ, ಎಂದು ಅವರು ಬರೆದಿದ್ದಾರೆ.

पिछले कुछ दिनों में कुछ अपनों को और बहुत सारे अपनों के अपनों को खो चुका हूं । खासकर दिल्ली में चाह कर भी बिहार के लोगों...

Posted by Sanjay Jaiswal on Thursday, 29 April 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News