ಸಂಕಪ್ಪ‌ ಕರ್ಕೇರ ಅಸೈಗೋಳಿ

Update: 2021-05-03 17:11 GMT

ಕೊಣಾಜೆ: ಕೊಣಾಜೆ ಗ್ರಾಮದ ಅಸೈಗೋಳಿಯ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರ ಸಂಕಪ್ಪ‌ ಕರ್ಕೇರ ಅಸೈಗೋಳಿ(73) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.

ಕೊಣಾಜೆ ಗ್ರಾಮ ಪಂ. ಮಾಜಿ  ಸದಸ್ಯರಾಗಿ, ಕರಾವಳಿ ಕ್ರೆಡಿಟ್ ಕೋಪರೆಟಿವ್  ಸೊಸೈಟಿ ಇದರ ನಿರ್ದೇಶಕರಾಗಿ, ಆದಿಶಕ್ತಿ ದೇವಸ್ಥಾನ ದಡಸ್ಸು ಇದರ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರಿಗೆ ಪತ್ನಿ,  ಓರ್ವ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ