ಪೊಲೀಸರ ಮೇಲೆ ಹಲ್ಲೆ ನಡೆಸಿದ ವಿದೇಶಿ ಮಹಿಳೆ: ಪ್ರಕರಣ ದಾಖಲು

Update: 2021-05-04 17:15 GMT

ಬೆಂಗಳೂರು, ಮೇ 4: ಮನೆಯ ಬಾಡಿಗೆ ವಿಚಾರವಾಗಿ ಪೊಲೀಸರ ಮೇಲೆ ವಿದೇಶಿ ಪ್ರಜೆಯೊಬ್ಬರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆ.ಪಿ.ನಗರ ಠಾಣೆಯ ಪಿಎಸ್ಸೈ ಯೋಗೇಶ್, ಎಎಸ್ಸೈ ರಮೇಶ್ ಹಲ್ಲೆಗೆ ಒಳಗಾಗಿದ್ದು, ಈ ಸಂಬಂಧ ನೀಡಿದ ದೂರಿನನ್ವಯ ಇರಾನ್ ಮೂಲದ ಗಜಲ್ ಸನೈಡಾ(28) ಎಂಬಾಕೆಯ ವಿರುದ್ಧ ಪ್ರಕರಣ ದಾಖಲಿಸಿ, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜೆ.ಪಿ.ನಗರದ 1ನೇ ಹಂತದಲ್ಲಿ ಸಿದ್ದೇಗೌಡ ಎಂಬುವರ ಮನೆಯಲ್ಲಿ ಗಜಲ್ ನೆಲೆಸಿದ್ದಳು. ಮನೆ ಖಾಲಿ ಮಾಡುತ್ತಿದ್ದ ಸಂದರ್ಭದಲ್ಲಿ ಮುಂಗಡ ಹಣದ ವಿಚಾರಕ್ಕೆ ಕಟ್ಟಡ ಮಾಲಕರ ಜತೆ ಜಗಳ ಮಾಡಿಕೊಂಡಿದ್ದಳು. ಈ ಬಗ್ಗೆ ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಹೊಯ್ಸಳ ಸಿಬ್ಬಂದಿ ರಮೇಶ್ ಮತ್ತು ಮುಖ್ಯಪೇದೆ ಆಶೀರ್ವಾದ್ ಸ್ಥಳಕ್ಕೆ ಹೋದಾಗ ಕಟ್ಟಡ ಮಾಲಕರ ಮೇಲೆ ವಿದ್ಯಾರ್ಥಿನಿ ಹಲ್ಲೆ ನಡೆಸುತ್ತಿದ್ದಳು ಎನ್ನಲಾಗಿದೆ.

ಈ ವೇಳೆ ಜಗಳ ಬಿಡಿಸಲು ಮುಂದಾದ ಪಿಎಸ್ಸೈ ಯೋಗೇಶ್, ಎಎಸ್ಸೈ ರಮೇಶ್ ಅವರ ಮೇಲೂ ಹಲ್ಲೆ ನಡೆಸಿದ್ದಾಳೆ ಎಂದು ತಿಳಿದುಬಂದಿದೆ. ಬಳಿಕ, ಮಹಿಳಾ ಪೆಪೊಲೀಸ್ ಸಿಬ್ಬಂದಿ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾರೆ.

ವಿದ್ಯಾರ್ಥಿನಿ ನೀಡಿರುವ ದೂರಿನ ಮೇರೆಗೆ ಕಟ್ಟಡ ಮಾಲಕರ ವಿರುದ್ಧವೂ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News