ಇರಾನ್: ಕಟ್ಟಡದಿಂದ ಬಿದ್ದು ಸ್ವಿಸ್ ರಾಜತಾಂತ್ರಿಕೆ ಸಾವು

Update: 2021-05-05 18:54 GMT

ಟೆಹರಾನ್ (ಇರಾನ್), ಮೇ 5: ಇರಾನ್‌ನಲ್ಲಿರುವ ಸ್ವಿಟ್ಸರ್‌ಲ್ಯಾಂಡ್ ರಾಯಭಾರ ಕಚೇರಿಯಲ್ಲಿ ಪ್ರಥಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬರು ಮಂಗಳವಾರ ಗಗನಚುಂಬಿ ಕಟ್ಟಡವೊಂದರಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ತುರ್ತು ಸೇವೆಗಳ ಇಲಾಖೆಯ ವಕ್ತಾರರೊಬ್ಬರು ಹೇಳಿರುವುದಾಗಿ ಇರಾನ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಟೆಹರಾನ್ ನಗರದ ಉತ್ತರ ಭಾಗದಲ್ಲಿರುವ ಗಗನಚುಂಬಿ ಕಟ್ಟಡವೊಂದರ ಫ್ಲ್ಯಾಟ್‌ನಲ್ಲಿ ಅವರು ವಾಸಿಸುತ್ತಿದ್ದರು. ಅವರ ಮನೆಗೆ ಮಂಗಳವಾರ ಮುಂಜಾನೆ ಕೆಲಸಕ್ಕೆ ಬಂದ ಆಳುವೊಬ್ಬರು ಮಾಲಕಿ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಕಟ್ಡಡದ ನಿರ್ವಾಹಕರ ಗಮನಕ್ಕೆ ತಂದರು. ಬಳಿಕ 51 ವರ್ಷದ ರಾಜತಾಂತ್ರಿಕೆಯ ಮೃತದೇಹವನ್ನು ತೋಟದ ಮಾಲಿ ಪತ್ತೆಹಚ್ಚಿದರು.

ಅವರು ಕಟ್ಟಡದಿಂದ ಕೆಳಗೆ ಬೀಳಲು ಕಾರಣ ಇನ್ನಷ್ಟೇ ಪತ್ತೆಯಾಗಬೇಕಾಗಿದೆ ಎಂದು ಇರಾನ್ ತಉರ್ತು ಸೇವೆಗಳ ವಕ್ತಾರ ಮುಜ್ತಾಬ ಖಾಲಿದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News