ಬಾಂಗ್ಲಾದೇಶದ ಐಪಿಎಲ್ ಆಟಗಾರರು ಸ್ವ ದೇಶಕ್ಕೆ ಆಗಮನ

Update: 2021-05-08 06:47 GMT
photo ://twitter.com/jenkers_en/

ಹೊಸದಿಲ್ಲಿ: ಐಪಿಎಲ್ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ನಂತರ ಬಾಂಗ್ಲಾದೇಶದ ಅಂತರ್‌ರಾಷ್ಟ್ರೀಯ ಆಟಗಾರರಾದ ಶಾಕೀಬ್ ಅಲ್ ಹಸನ್ ಮತ್ತು ಮುಸ್ತಾಫಿರ್ರಹ್ಮಾನ್ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಏರ್ಪಡಿಸಿದ ಚಾರ್ಟರ್ಡ್ ವಿಮಾನದಲ್ಲಿ ಸುರಕ್ಷಿತವಾಗಿ ಢಾಕಾಕ್ಕೆ ವಾಪಸಾಗಿದ್ದಾರೆ.

 ‘‘ನಾವು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿಬಾಂಗ್ಲಾದೇಶಕ್ಕೆ ಮರಳಿದ್ದೇವೆ. ರಾಜಸಾನ ರಾಯಲ್ಸ್ ಮತ್ತು ಕೆಕೆ ರೈಡರ್ಸ್ ಫ್ರಾಂಚೈಸಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಆರೋಗ್ಯ ಸಚಿವಾಲಯದ ಕೊಡುಗೆಗಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮುಸ್ತಾಫಿಝುರ್ರಹ್ಮಾನ್’’ ಟ್ವೀಟ್ ಮಾಡಿದ್ದಾರೆ. ಬಯೋ ಬಬಲ್‌ನಲ್ಲಿ ಕೋವಿಡ್ ಸೋಂಕು ವರದಿಯಾದ ನಂತರ ಋತುವಿನಲ್ಲಿ ಲಾಭದಾಯಕ ಟ್ವೆಂಟಿ-20 ಪಂದ್ಯಾವಳಿಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News