ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 8,923 ಕೋಟಿ ರೂ. ನಿಧಿ ಬಿಡುಗಡೆ

Update: 2021-05-09 18:39 GMT

ಹೊಸದಿಲ್ಲಿ, ಮೇ 10: ಕೊರೋನ ಸೋಂಕಿನ ನಿಯಂತ್ರಣ ಉಪಕ್ರಮಗಳಿಗೆ ನೆರವಾಗಲು 25 ರಾಜ್ಯಗಳಿಗೆ 8,923 ಕೋಟಿ ರೂ.ಗಳ ಅನುದಾನವನ್ನು ಕೇಂದ್ರ ಸರಕಾರ ರವಿವಾರ ಬಿಡುಗಡೆೊಳಿಸಿದೆ ಎಂದು ಮೂಲಗಳು ಹೇಳಿವೆ.

ಕೊರೋನ ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ಗಳಿಗೆ ನಿಗದಿತ ಅವಧಿಗಿಂತ 1 ತಿಂಗಳ ಮೊದಲೇ ಹಣ ಬಿಡುಗಡೆಗೊಳಿಸಲಾಗಿದೆ. ಆಯಾ ರಾಜ್ಯಗಳು ನಿರ್ಧಿ್ಟ ಪ್ರಮಾಣದಲ್ಲಿ ಈ ಮೊತ್ತವನ್ನು ಹಂಚಲಿವೆ ಎಂದು ಕೇಂದ್ರ ವಿತ್ತ ಇಲಾಖೆ ಹೇಳಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಮೊದಲ ಕಂತಿನ ಅನುದಾನ ಜೂನ್ನಲ್ಲಿ ಬಿಡುಗಡೆಗೊಳಿಸಬೇಕಾಗಿದೆ.

ಅಲ್ಲದೆ ಈಗಿರುವ ಪರಿಸ್ಥಿತಿಯನ್ನು ಗಮನಿಸಿ, ಕೆಲವು ಷರತ್ತುಗಳಿಂದ ವಿನಾಯಿತಿ ನೀಡಲಾಗಿದೆ ಎಂದೂ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News