ಕೊರೋನ ಸೋಂಕಿನಿಂದ ಎಚ್.ಎಸ್.ದೊರೆಸ್ವಾಮಿ ಗುಣಮುಖ

Update: 2021-05-12 17:32 GMT

ಬೆಂಗಳೂರು, ಮೇ 12: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ 104 ವರ್ಷದ ಎಚ್.ಎಸ್.ದೊರೆಸ್ವಾಮಿ ಗುಣಮುಖರಾಗಿದ್ದಾರೆ.

ಕೊರೋನ ಸೋಕಿನಿಂದಾಗಿ ಮೇ 6ರಂದು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಎಚ್.ಎಸ್.ದೊರೆಸ್ವಾಮಿ, ಆಸ್ಪತ್ರೆಯ ನಿರ್ದೇಶಕ ಮಂಜುನಾಥ ಮಾರ್ಗದರ್ಶನದಲ್ಲಿ ವೈದ್ಯರು ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದಾರೆ. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಮನೆಗೆ ತೆರಳಿ ವಿಶ್ರಾಂತಿಯಲ್ಲಿದ್ದಾರೆ.

ಆಸ್ಪತ್ರೆಯಲ್ಲಿ ಎಚ್.ಎಸ್.ದೊರೆಸ್ವಾಮಿಗೆ ಪ್ರತಿದಿನ ಆಮ್ಲಜನಕದ ಮಟ್ಟ, ಬಿಪಿ, ಮಧುಮೇಹ ಪರೀಕ್ಷೆ ನಡೆಸಲಾಗುತ್ತಿತ್ತು. ವೈದ್ಯರ ಕಾಳಜಿ, ಆರೈಕೆಯಿಂದಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ದೊರೆಸ್ವಾಮಿ ಅವರ ಒಡನಾಡಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News