ವಾಯುಪಡೆಯ ಬೆಡ್ ಬಳಕೆ ಮಾಡದೆ ನಿರ್ಲಕ್ಷ್ಯ: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2021-05-12 17:33 GMT

ಬೆಂಗಳೂರು, ಮೇ 12: ಕೊರೋನ ರೋಗಿಗಳಿಗಾಗಿ ಭಾರತೀಯ ವಾಯುಪಡೆಯು 100 ಕೋವಿಡ್ ಬೆಡ್‍ಗಳನ್ನು ಒದಗಿಸಿದ್ದರೂ ಯಾಕೇ ಅವುಗಳನ್ನು ಬಳಸಿಕೊಂಡಿಲ್ಲ ಎಂದು ಹೈಕೋರ್ಟ್ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ಈ ಕುರಿತು ಸಲ್ಲಿಸಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ವಾಯುಪಡೆಯು ಬೆಡ್‍ಗಳು, ವೈದ್ಯರು, ಸಿಬ್ಬಂದಿಯನ್ನೂ ನೀಡಿದೆ. ಆದರೆ ಅದನ್ನು ಬಳಸಲು ಬಿಬಿಎಂಪಿ ವಿಫಲವಾಗಿದೆ. ಈ ಬಗ್ಗೆ ವಿವರಣೆ ನೀಡುವಂತೆ ಬಿಬಿಎಂಪಿ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಕೇಂದ್ರ ಸರಕಾರದ ಪರ ವಾದಿಸಿದ ವಕೀಲರು, ಕೊರೋನ ಸಂಕಷ್ಟ ಕಾಲದಲ್ಲಿ ಸಮಪರ್ಕವಾಗಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ವಾಯುಪಡೆಯು ತಾನೇ ಮುಂದೆ ಬಂದು ಸಾಕಷ್ಟು ಸೌಕರ್ಯಗಳನ್ನು ಒದಗಿಸಿದೆ. ಆದರೆ ಈವರೆಗೂ ಬಿಬಿಎಂಪಿ ಇದನ್ನು ಬಳಸಿಕೊಂಡಿಲ್ಲ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಇದನ್ನು ಆಲಿಸಿದ ನ್ಯಾಯಪೀಠ, ತಕ್ಷಣ ಬೆಡ್‍ಗಳನ್ನು ಬಳಸಿಕೊಳ್ಳಲು ಸೂಚನೆ ನೀಡಿದೆ. ಇದೆ ವೇಳೆ ರಾಜ್ಯ ಸರಕಾರವೂ ರೈಲ್ವೆ ಇಲಾಖೆ ಒದಗಿಸಿರುವ ಬೆಡ್‍ಗಳನ್ನು ಬಳಸಿಕೊಂಡಿಲ್ಲ. ಇದಕ್ಕೂ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News