ಅದ್ದ ಹಾಜಿ ಗೋಳ್ತಮಜಲ್
Update: 2021-05-14 18:43 IST
ಕಲ್ಲಡ್ಕ: ಗೋಳ್ತಮಜಲ್ ನಿವಾಸಿ, ಮರ್ಹೂಮ್ ಹಜಾಜ್ ಜಿ.ಅಬ್ದುಲ್ ಖಾದರ್ ಹಾಜಿಯವರ ಸಹೋದರ ಅಬ್ದುಲ್ ರಹ್ಮಾನ್ ಹಾಜಿ (ಅದ್ದ ಹಾಜಿ) ಶುಕ್ರವಾರ ನಿಧನರಾದರು.
ಅವರು ಕಲ್ಲಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಮತ್ತು ಬಳಿಕ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅದ್ದ ಹಾಜಿ ಸುಮಾರು 40 ವರ್ಷಗಳಿಂದ ಕಲ್ಲಡ್ಕ ಜುಮಾ ಮಸೀದಿಯ ಬಳಿ ದಿನಸಿ ಉದ್ಯಮಿಯಾಗಿದ್ದರು.