×
Ad

ಲಾಕ್‍ಡೌನ್ ಪರಿಣಾಮ: ರಾಜಧಾನಿ ಬೆಂಗಳೂರಿನಲ್ಲಿ ತಗ್ಗಿದ ಅಪರಾಧ ಚಟುವಟಿಕೆ

Update: 2021-05-18 23:06 IST

ಬೆಂಗಳೂರು, ಮೇ 18: ಕೋವಿಡ್ ನಿಯಂತ್ರಣ ಸಂಬಂಧ ರಾಜ್ಯ ಸರಕಾರ ಜಾರಿಗೊಳಿಸಿರುವ ಲಾಕ್‍ಡೌನ್ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ತಗ್ಗಿವೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು-ಮೂರು ತಿಂಗಳಿನಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಪ್ರಸ್ತುತ ಸಾಲಿನ ಬೆಂಗಳೂರಿನ ಒಟ್ಟು ಪೊಲೀಸ್ ಠಾಣೆಗಳಲ್ಲಿ ಜನವರಿ ತಿಂಗಳಿನಲ್ಲಿ 6,526 ಪ್ರಕರಣಗಳು ದಾಖಲಾಗಿವೆ.

ಫೆಬ್ರವರಿ-5,642, ಮಾರ್ಚ್-3,358, ಎಪ್ರಿಲ್-2,028. ಇನ್ನು ಮೇ ತಿಂಗಳ ಎರಡು ವಾರಗಳಲ್ಲಿ ಕೇವಲ 546 ಪ್ರಕರಣಗಳು ಮಾತ್ರ ದಾಖಲಾಗಿವೆ. ಈ ಪ್ರಕರಣಗಳ ಪೈಕಿ ಸೈಬರ್ ಕ್ರೈಂ ಪ್ರಕರಣಗಳೇ ಹೆಚ್ಚಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News