ಪಿ. ಜಿ. ನಾರಾಯಣ ರಾವ್

Update: 2021-05-20 17:31 GMT

ಪಡುಬಿದ್ರಿ: ಇಲ್ಲಿನ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ, ಪಡುಬಿದ್ರಿ ನಿವಾಸಿ ಪಿ. ಜಿ. ನಾರಾಯಣ ರಾವ್ (84) ಅಸೌಖ್ಯದಿಂದ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದರು. 

ಖಡ್ಗೇಶ್ವರೀ ಸನ್ನಿಧಾನದಲ್ಲಿ ಸುಮಾರು 50 ವರ್ಷಗಳಿಗೂ ಅಧಿಕ ಕಾಲ ಪಾತ್ರಿಗಳಾಗಿ ಸೇವೆ ಸಲ್ಲಿಸಿದ್ದರು. ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮಾಜದ ಹಿರಿಯರೂ, ಖ್ಯಾತನಾಮರೂ ಆಗಿದ್ದ ಮೃತರು ಉಡುಪಿ ಅಷ್ಟ ಮಠಾಧೀಶರಿಂದ, ಇತ್ತೀಚೆಗೆ ನಡೆದಿದ್ದ ಕಾಪು ತಾಲೂಕು ತೃತೀಯ ಸಾಹಿತ್ಯ ಸಮ್ಮೇಳನ ಹಾಗೂ ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಪ್ರಕಾಶಾಭಿನಂದನ ಕಾರ್ಯಕ್ರಮವೂ ಸೇರಿದಂತೆ ಹಲವೆಡೆಗಳಲ್ಲಿ ಸಮ್ಮಾನಿಸಲ್ಪಟ್ಟಿದ್ದರು. ಇವರಿಗೆ ದೇಶ ವಿದೇಶಗಳಲ್ಲಿ ಅಸಂಖ್ಯ ಅಭಿಮಾನಿ ಅನುಯಾಯಿಗಳನ್ನು ಅವರು ಹೊಂದಿದ್ದರು.

ನಾರಾಯಣ ರಾವ್ ನಿಧನಕ್ಕೆ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರು, ಉಡುಪಿ ಪರ್ಯಾಯ ಪೀಠಾಧಿಪತಿ ಶ್ರೀ ಈಶಪ್ರಿಯ ತೀರ್ಥರು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್ ನ ವೈ. ಎನ್. ರಾಮಚಂದ್ರ ರಾವ್ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ