×
Ad

ಡಾ.ರಾಜ್‍ಕುಮಾರ್ ಅವವರ ಯೋಗ ಗುರು ಹೊನ್ನಪ್ಪ ಫಕೀರಪ್ಪ ನಿಧನ

Update: 2021-05-20 23:09 IST

ಬೆಂಗಳೂರು, ಮೇ 20: ವರನಟ ಡಾ.ರಾಜ್‍ಕುಮಾರ್ ಅವರ ಯೋಗ ಗುರು ಎಂದೇ ಖ್ಯಾತಿಯಾಗಿದ್ದ ಹೊನ್ನಪ್ಪ ಫಕೀರಪ್ಪ ನಾಯ್ಕರ್ ಅವರು ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

90 ವರ್ಷದ ಹೊನ್ನಪ್ಪ ಫಕೀರಪ್ಪ ನಾಯ್ಕರ್ ಅವರಿಗೆ ಇತ್ತೀಚಿಗೆ ಕೋವಿಡ್ ಸೋಂಕು ತಗುಲಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಕನಕಪುರದ ಬಳಿಯ ನಾಗದೇವನಹಳ್ಳಿಯಲ್ಲಿ ಹೊನ್ನಪ್ಪ ನಾಯ್ಕರ್ ಅವರ ಅಂತಿಮ ಸಂಸ್ಕಾರ ನೆರವೇರಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೊನ್ನಪ್ಪ ನಾಯ್ಕರ್ ನಂತರ ಯೋಗದತ್ತ ಮುಖ ಮಾಡಿದರು. ಡಾ. ರಾಜಕುಮಾರ್ ಅವರ ಕುಟುಂಬ ಸೇರಿದಂತೆ ಹಲವು ಗಣ್ಯರಿಗೆ ಯೋಗ ಹೇಳಿಕೊಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News