ಹೋಂ ಕೇರ್ ನಲ್ಲಿರುವ ಸೋಂಕಿತರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯ ಕಡ್ಡಾಯ: ಬಿಬಿಎಂಪಿ

Update: 2021-05-21 17:49 GMT

ಬೆಂಗಳೂರು, ಮೇ 21: ಕೋವಿಡ್ ಸೋಂಕಿತರು ಹೋಂ ಐಸೋಲೇಷನ್‍ನಲ್ಲಿ ಉಳಿಯಬೇಕಾದರೆ ಸೋಂಕಿತರಿರುವ ಮನೆಯಲ್ಲಿ ಉತ್ತಮ ಗಾಳಿ ವ್ಯವಸ್ಥೆ, ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ಶೌಚಾಲಯ ಹೊಂದಿರುವುದು ಕಡ್ಡಾಯವೆಂದು ಬಿಬಿಎಂಪಿ ಸೂಚಿಸಿದೆ.

ಈ ಕುರಿತು ಮಾರ್ಗಸೂಚಿಯನ್ನು ಪರಿಷ್ಕರಿಸಿರುವ ಇಲಾಖೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರಿಗೆ ಇರಬೇಕಾದ ವಿಶೇಷ ಸೌಲಭ್ಯಗಳ ಕುರಿತು ಪರಿಷ್ಕೃತ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ. ಈ ಸೌಲಭ್ಯ ಇಲ್ಲದವರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬೇಕೆಂದು ತಿಳಿಸಲಾಗಿದೆ.

ಕೋವಿಡ್ ಸೋಂಕಿತರು ಮನೆಯ ಇತರ ವ್ಯಕ್ತಿಗಳಿಂದ (ವಿಶೇಷವಾಗಿ ವಯಸ್ಸಾದವರು, ಅಧಿಕ ರಕ್ತದೊತ್ತಡ, ಹೃದಯ ರಕ್ತನಾಳದ ಖಾಯಿಲೆ, ಮೂತ್ರಪಿಂಡ ಖಾಯಿಲೆ ಮತ್ತು ಕೋಮಾರ್ಬಿಡ್ ಪರಿಸ್ಥಿತಿ ಇರುವವರು) ದೂರವಿರಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು(ಆರೋಗ್ಯ) ಪ್ರಕಟನೆಯಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News