ಸುಂದರಿ ಶೆಟ್ಟಿ
Update: 2021-05-22 15:59 IST
ಮಂಗಳೂರು : ಮರೋಳಿ ಕತ್ತಲ್ ಸಾರ್ ಪಡುಪೆರಾರ ನಿವಾಸಿ ದಿ. ಶೀನ ಶೆಟ್ಟಿ ಅವರ ಪತ್ನಿ ಸೂಲಗಿತ್ತಿ ಸುಂದರಿ ಶೆಟ್ಟಿ (88) ಅವರು ಶುಕ್ರವಾರ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಜಾತಿ ಮತ ಭೇದ ಮರೆತು ಹಗಲು ರಾತ್ರಿ ಎನ್ನದೆ ಪಡುಪೆರಾರ ಗ್ರಾಮದ ಸುತ್ತಮುತ್ತಲ ಪರಿಸರದಲ್ಲಿ ಯಾರಿಗಾದರೂ ಹೆರಿಗೆ ನೋವು ಬಂದರೆ ಯಾವುದೇ ಹೊತ್ತಿನಲ್ಲಾದರೂ ತನ್ನೆಲ್ಲಾ ಕೆಲಸಗಳನ್ನು ಬದಿಗಿಟ್ಟು ಅವರ ನೋವಿಗೆ ಸ್ಪಂದಿಸಿ ಹೆರಿಗೆಯನ್ನು ಸುಸೂತ್ರವಾಗಿ ಮಾಡಿ ಅವರ ಹಾರೈಕೆ ಮಾಡುತ್ತಿದ್ದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದ ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.