ಲಾಕ್‍ಡೌನ್: ಅನಗತ್ಯ ಓಡಾಡಿದರೆ ವಶಕ್ಕೆ ಪಡೆಯುತ್ತೇವೆ; ಪೊಲೀಸ್ ಆಯುಕ್ತ ಕಮಲ್ ಪಂತ್

Update: 2021-05-22 15:04 GMT
ಕಮಲ್ ಪಂತ್

ಬೆಂಗಳೂರು, ಮೇ 22: ಕೋವಿಡ್ ಸಂಬಂಧ ರಾಜ್ಯ ಸರಕಾರ ಲಾಕ್‍ಡೌನ್ ಅನ್ನು ಮತ್ತಷ್ಟು ವಿಸ್ತರಣೆ ಮಾಡಿರುವ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅನಗತ್ಯ ಓಡಾಟ ನಡೆಸಿದರೂ ವಶಕ್ಕೆ ಪಡೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿದ್ದು, ವಾಹನ ಜಪ್ತಿಯ ಜೊತೆಗೆ, ಸವಾರರನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

ಇಂದು ಒಂದೇ ದಿನ 1500 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದ್ದೇನೆ.ಅಲ್ಲದೆ, ಸರಕಾರದ ಮಾರ್ಗಸೂಚಿಗಳಿಗೆ ಎಲ್ಲೆಡೆ ಬಹುತೇಕ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.

ಲಾಕ್‍ಡೌನ್ ಎಂದರೆ ಜನರು ಎಲ್ಲಿಯೂ ಗುಂಪು ಸೇರಬಾರದು. ವಾಹನಗಳ ಓಡಾಟ ಇರುವುದು ನಿಜ. ಏಕೆಂದರೆ ಒಂದಷ್ಟು ಚಟುವಟಿಕೆಗಳಿಗೆ ವಿನಾಯಿತಿ ಇದೆ ಎಂದ ಅವರು, ದಿನಕ್ಕೆ ಸರಾಸರಿ ಸಾವಿರಾರು ವಾಹನಗಳು ಜಪ್ತಿಯಾಗುತ್ತಿದ್ದು, ಮುಂದೆಯೂ ಆಗಲಿದೆ. ಲಾಕ್‍ಡೌನ್ ಜಾರಿಗೆ ಪೊಲೀಸರು ಶ್ರಮ ವಹಿಸಿದ್ದಾರೆ. ಮುಂದೆಯೂ ಜನರ ಸಹಕಾರ ಹೀಗೆಯೇ ಇರಬೇಕು ಎಂದು ಮನವಿ ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News