×
Ad

ಯಾಸ್ ಚಂಡಮಾರುತ ಪರಿಣಾಮ: ರೈಲು ಸಂಚಾರ ತಾತ್ಕಾಲಿಕ ರದ್ದು

Update: 2021-05-22 21:54 IST

ಬೆಂಗಳೂರು, ಮೇ 22: ಪೂರ್ವ ಕರಾವಳಿಯಲ್ಲಿ ಉಂಟಾಗಿರುವ ಯಾಸ್ ಚಂಡಮಾರುತದ ಬಿಸಿ ರಾಜಧಾನಿ ಬೆಂಗಳೂರಿಗೂ ತಟ್ಟಿದ್ದು, ಇಲ್ಲಿಂದ ಹೊರಡುವ ಹಲವು ರೈಲುಗಳು ರದ್ದಾಗಿದೆ. 

ಈ ಹಿಂದೆ ತೌಕ್ತೆ ಚಂಡಮಾರುತದಿಂದ ಹಲವು ಭಾಗದ ರೈಲು ರದ್ದಾಗಿದ್ದವು, ಇದೀಗ ಯಾಸ್ ಚಂಡಮಾರುತದಿಂದಾಗಿ ರದ್ದಾಗಿದೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 25 ಮತ್ತು 26ರ ಹೌರಾ-ಯಶವಂತಪುರ ವಿಶೇಷ ಎಕ್ಸ್‍ಪ್ರೆಸ್(ರೈಲು ಸಂಖ್ಯೆ-02245) ಅನ್ನು ಹೌರಾದಿಂದ ರದ್ದುಗೊಳಿಸಲಾಗುತ್ತಿದೆ. ಮೇ 24 ಮತ್ತು 25ರ ಹೌರಾ ವಿಶೇಷ ಎಕ್ಸ್ ಪ್ರೆಸ್-(ರೈಲು ಸಂಖ್ಯೆ-02246) ಯಶವಂತಪುರ ಅನ್ನು ರದ್ದಾಗಿದೆ.

ಅದೇ ರೀತಿ, ಗುವಾಹಟಿ-ಬೆಂಗಳೂರು ಕ್ಯಾಂಟ್ ಸ್ಪೆಷಲ್ ಎಕ್ಸ್ ಪ್ರೆಸ್, ಮುಝಾಫರಪುರ-ಯಶವಂತಪುರ ಸ್ಪೆಷಲ್ ಎಕ್ಸ್‍ಪ್ರೆಸ್, ಭುವನೇಶ್ವರ-ಕೆಎಸ್‍ಆರ್ ಬೆಂಗಳೂರು ವಿಶೇಷ ಎಕ್ಸ್‍ಪ್ರೆಸ್ ಸೇರಿದಂತೆ ಇನ್ನಿತರೆ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News