ಹರಿದ ಬೂಟ್ ಗಳ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ನೆರವು ಯಾಚಿಸಿದ ಝಿಂಬಾಬ್ವೆ ಕ್ರಿಕೆಟಿಗ

Update: 2021-05-23 14:19 GMT

ಹೊಸದಿಲ್ಲಿ, ಮೇ 23: ಝಿಂಬಾಬ್ವೆ ಕ್ರಿಕೆಟಿಗ ರಯಾನ್ ಬರ್ಲ್ ಅವರು ಹರಿದಿರುವ  ಬೂಟ್ ಗಳ  ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರತಿ ಸರಣಿಯ ನಂತರವೂ ತಮ್ಮ ಬೂಟುಗಳನ್ನು ಹಿಂತಿರುಗಿಸಬೇಕು ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಝಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ಅವರು ತಾನು ಧರಿಸಿರುವ ಶೂಗಳ ಚಿತ್ರವನ್ನು ಟ್ವಿಟರ್‌ ನಲ್ಲಿ ಹಂಚಿಕೊಂಡರು.  ಸಹಾಯ ಹಸ್ತ ನೀಡುವಂತೆ ಪ್ರಾಯೋಜಕರನ್ನು ಕೇಳಿಕೊಂಡರು.

ಪ್ರತಿ ಸರಣಿಯ ನಂತರ ತನ್ನ ಹರಿದ ಬೂಟ್ ಗಳಿಗೆ ಅಂಟು ಹಾಕಿಕೊಳ್ಳಬೇಕಾಗುತ್ತದೆ.  ನನಗೆ  ಧನಸಹಾಯ ಮಾಡಲು ಯಾವುದೇ ಪ್ರಾಯೋಜಕರು ಲಭ್ಯವಿಲ್ಲ  ಎಂದು ಬರ್ಲ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

27ರ ವಯಸ್ಸಿನ ಬರ್ಲ್ ಟ್ವೀಟ್ ಮಾಡಿದ ಬಳಿಕ ಹಲವಾರು ಕ್ರಿಕೆಟ್ ಅಭಿಮಾನಿಗಳು ಝಿಂಬಾಬ್ವೆ ಕ್ರಿಕೆಟಿಗನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತ, ಇಂಗ್ಲೆಂಡ್ ಹಾಗೂ  ಆಸ್ಟ್ರೇಲಿಯಾ ತಂಡಗಳು ತಮ್ಮ ಝಿಂಬಾಬ್ವೆ ಪ್ರವಾಸವನ್ನು ಮುಂದೂಡಬಾರದು ಎಂದು ಅಭಿಮಾನಿಯೊಬ್ಬರು ಒತ್ತಾಯಿಸಿದರು.

ಇತ್ತೀಚೆಗೆ ಸ್ವದೇಶದಲ್ಲಿ ಪಾಕಿಸ್ತಾನ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ್ದ ಝಿಂಬಾಬ್ಬೆ ವೈಟ್ ವಾಶ್ ಅನುಭವಿಸಿತ್ತು. ಟ್ವೆಂಟಿ-20 ಪಂದ್ಯದಲ್ಲಿ 119 ರನ್ ಗಳಿಸಿದ್ದರೂ ಪಾಕ್ ತಂಡವನ್ನು 99 ರನ್ ಗೆ ನಿಯಂತ್ರಿಸಿ ಜಯಭೇರಿ ಬಾರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News