×
Ad

ಲಾಕ್‌ ಡೌನ್ ಸಡಿಲ ಕುರಿತು ಚಿಂತನೆ: ಗೌರವ್ ಗುಪ್ತ

Update: 2021-05-31 17:04 IST

ಬೆಂಗಳೂರು, ಮೇ.31: ಕೋವಿಡ್ ಸಂಬಂಧ ಜಾರಿಗೊಳಿಸಿರುವ ಲಾಕ್‌ಡೌನ್ ಹಂತ ಹಂತವಾಗಿ ಸಡಿಲಗೊಳಿ ಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಸೋಮವಾರ ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಾಣುತ್ತಿರುವ ಹಿನ್ನೆಲೆ ಜೂ.7ರ ಬಳಿಕ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ಲಾಕ್‌ಡೌನ್ ಅನ್ನು ಸಡಿಲಿಕೆ ಮಾಡುವುದಾದರೆ, ಹಂತ ಹಂತವಾಗಿ ಮಾಡಬೇಕು. ಆಗ ಮಾತ್ರ ಕೋವಿಡ್ ನಿಯಂತ್ರಣದಲ್ಲಿರುತ್ತದೆ. ಈ ಸಂಬಂಧ ಚರ್ಚೆ ನಡೆಸಲಾಗುತ್ತಿದೆ ಎಂದ ಅವರು, ಸಾಮಾನ್ಯ ಜೀವನಕ್ಕೆ ನಾವು ಮರಳಿ ಹೋಗಬೇಕು. ಹೀಗಾಗಿ, ಈ ಹಿಂದಿನ ಆನ್‌ಲಾಕ್ ಮಾದರಿಯಲ್ಲಿಯೇ ಸಡಿಲಗೊಳಿ ಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದರು.

ಈ ಹಿಂದೆ ಬೆಂಗಳೂರಿನಲ್ಲಿ 25 ರಿಂದ 30 ಸಾವಿರದವರೆಗೂ ಏರಿಕೆಯಾಗಿದ್ದ ದೈನಂದಿನ ಹೊಸ ಸೋಂಕು ಪ್ರಕರಣಗಳ ಪ್ರಮಾಣ ಇದೀಗ ಗಣನೀಯವಾಗಿ ಇಳಿಕೆಯಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗು ವುದು ಉತ್ತಮ ಸಂಕೇತಾದರೂ, ಪ್ರಸ್ತುತ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ಡೌನ್ ತೆರವುಗೊಳಿಸಿದ ಬಳಿಕವೂ ಸೋಂಕಿನ ಪ್ರಮಾಣ ಹೆಚ್ಚಾಗದಂತೆ ತಡೆಯಲು ಜನರಲ್ಲಿ ಸ್ವಯಂ ಶಿಸ್ತು ಮೂಡಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟ ಬಹುದು ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News