ಯುಎಇ: ಹೊರಾಂಗಣ ನೌಕರರಿಗೆ ಮಧ್ಯಾಹ್ನ ಕೆಲಸದ ವಿರಾಮ ಘೋಷಣೆ

Update: 2021-06-02 18:33 GMT

ದುಬೈ (ಯುಎಇ), ಜೂ. 2: ಯುಎಇಯ ಮಾನವ ಸಂಪನ್ಮೂಲಗಳ ಸಚಿವಾಲಯವು ಬುಧವಾರ ಹೊರಾಂಗಣ ಕೆಲಸಗಾರರಿಗೆ ಮೂರು ತಿಂಗಳ ಮಧ್ಯಾಹ್ನದ ವಿರಾಮವನ್ನು ಘೋಷಿಸಿದೆ.

ನೂತನ ನಿಯಮವು ಬಿಸಿಲಿನಲ್ಲಿ ಮತ್ತು ತೆರೆದ ಸ್ಥಳಗಳಲ್ಲಿ ಮಧ್ಯಾಹ್ಯ 12:30ರಿಂದ 3:30ರವರೆಗೆ ಯಾವುದೇ ಕೆಲಸ ಮಾಡುವುದನ್ನು ನಿಷೇಧಿಸಿದೆ.

ಈ ನಿಯಮವು ಜೂನ್ 15ರಿಂದ ಸೆಪ್ಟಂಬರ್ 15ರವರೆಗೆ ಜಾರಿಯಲ್ಲಿರುತ್ತದೆ. ‘‘ಈ ನಿಯಮವನ್ನು ಜಾರಿಗೊಳಿಸಿ ಅದರ ಉದ್ದೇಶಗಳನ್ನು ಪೂರೈಸುವಲ್ಲಿ ಸಚಿವಾಲಯವು ಖಾಸಗಿ ಕ್ಷೇತ್ರದಲ್ಲಿನ ಭಾಗೀದಾರರ ಸಹಕಾರವನ್ನು ಕೋರುತ್ತದೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News