×
Ad

ಬಿಬಿಎಂಪಿ ಆಯುಕ್ತ ಗೌರವ್‍ ಗುಪ್ತ ಟ್ವಿಟ್ಟರ್ ಖಾತೆ ಹ್ಯಾಕ್

Update: 2021-06-04 22:09 IST

ಬೆಂಗಳೂರು, ಜೂ.4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್‍ ಗುಪ್ತ ಅವರ ಟ್ವಿಟ್ಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.

ಮುಖ್ಯ ಆಯುಕ್ತ ಗೌರವ್‍ಗುಪ್ತ ಅವರ ಟ್ವಿಟ್ಟರ್ ಖಾತೆಯ ಡಿಪಿ ಫೋಟೋವನ್ನು ಟೆಸ್ಲಾಯೆಂದು ಬದಲಾಯಿಸಲಾಗಿತ್ತು. ಹ್ಯಾಕರ್ ಈ ಟ್ವಿಟ್ಟರ್ ಬಳಸಿ ಮಾಡಿರುವ ಟ್ವೀಟ್ ಒಂದರಲ್ಲಿ 'ವಿಶ್ವದ ಕಠಿಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮಾನವೀಯತೆಯ ಹಾದಿಯಲ್ಲಿ ನಡೆಯುವುದು ನಮ್ಮ ಗುರಿ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು' ಎಂದು ಬರೆಲಾಗಿದೆ.

ಮುಖ್ಯ ಆಯುಕ್ತರ ಟ್ವಿಟ್ಟರ್ ಖಾತೆಯನ್ನು ಯಾರು ಹ್ಯಾಕ್ ಮಾಡಿದ್ದಾರೆ, ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News