ನಟ ಲಿಖಿತ್ ಶೆಟ್ಟಿಯಿಂದ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ

Update: 2021-06-08 05:04 GMT

ಬೆಂಗಳೂರು, ಜೂ.8: ಕೋವಿಡ್-19, ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಕನ್ನಡ ಚಲನಚಿತ್ರ ನಟ, ನಿರ್ಮಾಪಕ ಲಿಖಿತ್ ಶೆಟ್ಟಿ ಸಹಾಯಹಸ್ತ ಚಾಚಿದ್ದು, 33ಕ್ಕೂ ಹೆಚ್ಚು ಶಿಕ್ಷಕರ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದ್ದಾರೆ.

ಬೆಂಗಳೂರಿನ ಖಾಸಗಿ ಶಿಕ್ಷಕರ ಸಂಘದ ಮುಖ್ಯಸ್ಥೆ ಆಯೆಷಾ ಶೇಖ್ ಬೆಂಗಳೂರು ಅವರನ್ನು ಸಂಪರ್ಕಿಸಿದ ಲಿಖಿತ್ ಶೆಟ್ಟಿ, ದಿನಸಿ ಕಿಟ್ ಗಳನ್ನು ಹಸ್ತಾಂತರಿಸಿದ್ದಾರೆ.

ಲಿಖಿತ್ ಶೆಟ್ಟಿ ಅವರು ಒರಿಯರ್ದೊರಿ ಅಸಲ್(ತುಳು), ನಮ್ ದುನಿಯಾ ನಮ್ ಸ್ಟೈಲ್, ಪೆಟ್ರೋಲ್ ಹಾಗೂ ಸಂಕಷ್ಟಕರ ಗಣಪತಿ , ಫ್ಯಾಮಿಲಿ ಪ್ಯಾಕ್ ಸಿನಿಮಾಗಳಲ್ಲಿ ನಾಯಕನಟರಾಗಿ ಅಭಿನಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News