ಕೋವಿಡ್19 ಲಸಿಕೆ ಅಕ್ರಮ ಮಾರಾಟ: ವೈದ್ಯರ ಜಾಮೀನು ತಿರಸ್ಕರಿಸಿದ ಅರ್ಜಿ ಕೋರ್ಟ್

Update: 2021-06-08 13:58 GMT

ಬೆಂಗಳೂರು, ಜೂ.8: ಕೋವಿಡ್-19 ಲಸಿಕೆ ಅಕ್ರಮ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ನಗರದ ವೈದ್ಯೆ ಪುಷ್ಪಿತಾ ಹಾಗೂ ಪ್ರೇಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 52ನೆ ಸಿಸಿಎಚ್ ಕೋರ್ಟ್ ತಿರಸ್ಕರಿಸಿದೆ.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿತು. ವೈದ್ಯೆಯ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರ ಪರವಾಗಿ ಸರಕಾರಿ ವಕೀಲೆ ನಿರ್ಮಲರಾಣಿ ವಾದ ಮಂಡಿಸಿದ್ದರು.

ಪುಷ್ಪಿತಾ(25) ಹಾಗೂ ಪ್ರೇಮಾ(34) ಬಂಧಿತ ಆರೋಪಿಗಳಾಗಿದ್ದು, ಮಂಜುನಾಥ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿದ್ದ ಪುಷ್ಪಿತಾ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವ್ಯಾಕ್ಸಿನ್ ಕದ್ದು ಅನ್ನಪೂರ್ಣೇಶ್ವರಿ ನಗರದ ಪ್ರೇಮಾ ಎನ್ನುವವರ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದ ವೈದ್ಯೆ ವ್ಯಕ್ತಿಗಳಿಂದ ಹಣ ಪಡೆದು ಅಕ್ರಮವಾಗಿ ವ್ಯಾಕ್ಸಿನ್ ನೀಡುತ್ತಿದ್ದಳು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News