25 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ ಎನ್‍ಸಿಬಿ: ಇಬ್ಬರ ಬಂಧನ

Update: 2021-06-08 17:48 GMT

ಬೆಂಗಳೂರು, ಜೂ.8: ಲ್ಯಾಪ್‍ಟಾಪ್ ಬ್ಯಾಗ್‍ಗಳಲ್ಲಿ ಮಾದಕ ವಸ್ತುವನ್ನು(ಡ್ರಗ್ಸ್) ಸಾಗಿಸುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‍ಸಿಬಿ) ಅಧಿಕಾರಿಗಳು, ಒಟ್ಟು 25 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ಪಾರ್ಸೆಲ್ ವಿಳಾಸದ ಆಧಾರದಲ್ಲಿ ಆರ್.ಖಾನ್ ಹಾಗೂ ಆತನ ಸಹಚರ ಎಸ್. ಹುಸೈನ್‍ನನ್ನು ಬೆಂಗಳೂರಿನಲ್ಲಿ ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ ಎಂದು ಎನ್‍ಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಆರೋಪಿಗಳು ಕೇರಳದಿಂದ ದೋಹಾಕ್ಕೆ ಪಾರ್ಸೆಲ್ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಮಾಹಿತಿ ಬಂದಿತ್ತು. ಜೂ.4ರಂದು ಕಾರ್ಯಾಚರಣೆ ನಡೆಸಿ, ಅಂತರ್‍ರಾಷ್ಟ್ರೀಯ ಕೊರಿಯರ್ ಘಟಕದಲ್ಲಿ ಪಾರ್ಸೆಲ್ ಬಾಕ್ಸ್ ಪತ್ತೆ ಮಾಡಲಾಯಿತು. ಅದರಲ್ಲಿದ್ದ 70 ಬ್ಯಾಗ್‍ಗಳ ಪೈಕಿ 13 ಬ್ಯಾಗ್‍ಗಳಲ್ಲಿ 3 ಕೆ.ಜಿ 800 ಗ್ರಾಂ. ಚರಸ್ ಇತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News