ಮೈದಾನದಲ್ಲಿ ಕುಸಿದು ಬಿದ್ದ ಫುಟ್ಬಾಲ್ ಆಟಗಾರ: ಕಣ್ಣೀರಿಟ್ಟ ಸಹ ಆಟಗಾರರು

Update: 2021-06-13 05:33 GMT
photo: AP

ಕೋಪನ್ ಹೇಗನ್:  ಇಲ್ಲಿನ ಟೆಲಿಯಾ ಪಾರ್ಕೆನ್ ಕ್ರೀಡಾಂಗಣದಲ್ಲಿ ಶನಿವಾರ ಫಿನ್ ಲ್ಯಾಂಡ್ ವಿರುದ್ಧದ ಯುಇಎಫ್ಎ ಯುರೋ 2020 ಹಣಾಹಣಿಯಲ್ಲಿ ಡೆನ್ಮಾರ್ಕ್ ತಂಡದ  ಮಿಡ್ ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸನ್ ಪಿಚ್ ಮೇಲೆ ಕುಸಿದು ಬಿದ್ದರು. ಇದರಿಂದ ಡೆನ್ಮಾರ್ಕ್ ಆಟಗಾರರು ಆತಂಕಕ್ಕೀಡಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

42 ನೇ ನಿಮಿಷದಲ್ಲಿ ಸ್ಕೋರ್ 0-0 ಆಗಿದ್ದಾಗ 29 ವರ್ಷದ ಎರಿಕ್ಸನ್ ಚೆಂಡನ್ನು ಸ್ವೀಕರಿಸಲು ಧಾವಿಸಿದರು. ಆದರೆ ಚೆಂಡು ಮೊಣಕಾಲಿಗೆ ಬಡಿದಿದ್ದರಿಂದ ಅವರು  ಕೆಳಗೆ ಬಿದ್ದರು.

ಸ್ವಲ್ಪ ಸಮಯದ ನಂತರ, ರೆಫರಿ ಆಂಥೋನಿ ಟೇಲರ್ ತುರ್ತು ವೈದ್ಯಕೀಯ ಸಹಾಯವನ್ನು ಯಾಚಿದರು.

ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಎರಿಕ್ಸನ್  ಅವರನ್ನು ಸುತ್ತುವರೆದರು. ವೈದ್ಯರು ಎರಿಕ್ಸನ್  ಎದೆಯನ್ನು ಪಂಪ್ ಮಾಡಿದರು. ಎರಿಕ್ಸೆನ್‌ಗೆ ಪಿಚ್‌ನಲ್ಲಿ ಸಿಪಿಆರ್(ಹೃದಯ ಮತ್ತು ಶ್ವಾಸಕೋಶ ಪ್ರಚೋದಕ) ನೀಡಲಾಗಿದೆ.

“ವೈದ್ಯಕೀಯ ತುರ್ತುಸ್ಥಿತಿಯ ಕಾರಣ ಕೋಪನ್ ಹೇಗನ್ ನಲ್ಲಿ ನಡೆದ ಯುಇಎಫ್ಎ ಯುರೋ 2020 ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ ”ಎಂದು ಹೇಳಿಕೆಯೊಂದು ತಿಳಿಸಿದೆ.

ಬಿಬಿಸಿ ಪತ್ರಕರ್ತ ಕಾನ್ ಸ್ಟಾನ್ ಟಿನ್ ಎಕ್ನರ್ ಪ್ರಕಾರ, ಎರಿಕ್ಸನ್ ಮತ್ತೆ ಪ್ರಜ್ಞೆ ಬಂದಿದೆ.

ರಾಯಿಟರ್ಸ್ ಛಾಯಾಗ್ರಾಹಕನ ಪ್ರಕಾರ, “ಎರಿಕ್ಸನ್ ಅವರನ್ನು ಪಿಚ್‌ನಿಂದ ಸ್ಟ್ರೆಚರ್‌ನಲ್ಲಿ ಸಾಗಿಸುತ್ತಿದ್ದಂತೆ ಕೈ ಎತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News